ಶನಿವಾರಸಂತೆ, ಜೂ. 2: ಶಿಥಿಲಾವಸ್ಥೆಯಲ್ಲಿದ್ದ ಕಂಬಗಳ ಮೇಲಿದ್ದ ‘ಸುಸ್ವಾಗತ’ ನಾಮಫಲಕವನ್ನು ಮುಂಜಾಗ್ರತಾ ಕ್ರಮವಾಗಿ ಕೆಳಗಿಳಿಸಿದ್ದ ಇಲ್ಲಿನ ಗ್ರಾಮ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಸ್ಥಳದ ತಡೆಗೋಡೆಗೆ ಒರಗಿಸಿಟ್ಟಿದೆ. ತಿಂಗಳಾದರೂ ದುರಸ್ತಿಪಡಿಸಿ ಯಥಾಸ್ಥಾನಕ್ಕೇರಿಸುವ ಕ್ರಮಕೈಗೊಳ್ಳದಿರುವ ಬಗ್ಗೆ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಟ್ಟಣಕ್ಕೆ ಬರುವವರಿಗೆ ಸ್ವಾಗತ ಕೋರುವ ‘ಸುಸ್ವಾಗತ’ ನಾಮಫಲಕವನ್ನು ಗ್ರಾಮ ಪಂಚಾಯಿತಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯ ಪ್ರವೇಶದ್ವಾರದಲ್ಲಿ ಅಳವಡಿಸಿತ್ತು. ಆ ಫಲಕದ ಎರಡೂ ಬದಿಯ ಕಬ್ಬಿಣದ ಕಂಬಗಳು ಶಿಥಿಲಾವಸ್ಥೆ ತಲಪಿ ಫಲಕ ಯಾವ ತಿಂಗಳಾಯಿತು. ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾಗಿ ದಿನಗಳುರುಳಿದರೂ, ಜನಪ್ರತಿನಿಧಿಗಳು ಯಾರೂ ಫಲಕದ ಕಂಬಗಳ ದುರಸ್ತಿಗೆ ಗಮನ ಹರಿಸಿಲ್ಲ. ಪಂಚಾಯಿತಿ ಅಧಿಕಾರಿಗಳೂ ಮೌನವಾಗಿದ್ದಾರೆ. ಆ ಫಲಕ ತುಕ್ಕು ಹಿಡಿದು ತ್ಯಾಜ್ಯ ರಾಶಿಗೋ, ಗುಜರಿ ಅಂಗಡಿಗೋ ಸೇರುವ ಮೊದಲು ಸುಸ್ವಾಗತಕ್ಕೇರಿಸಿ ಎಂದು ಯುವಕರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.