ಬೆಂಗಳೂರು, ಜೂ. 1: ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ನಡುವೆ ಕಗ್ಗಂಟಾಗಿ ಪರಿಣಮಿಸಿದ ಖಾತೆ ಹಂಚಿಕೆ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದಿದ್ದು, ಗೃಹ, ಕಂದಾಯ, ಆರೋಗ್ಯ, ಸೇರಿದಂತೆ 22 ಖಾತೆಗಳು ಕಾಂಗ್ರೆಸ್ ಪಾಲಾಗಿವೆ. ಹಣಕಾಸು, ಅಬಕಾರಿ, ಇಂಧನ, ಲೋಕೋಪಯೋಗಿ ಮತ್ತಿತರ 15 ಖಾತೆಗಳನ್ನು ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ. ಖಾಸಗಿ ಹೊಟೇಲ್‍ನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್, ಕಾಂಗ್ರೆಸ್, ಜೆಡಿಎಸ್ ನಡುವಿನ ಖಾತೆ ಹಂಚಿಕೆಯ ವಿವರ ಒದಗಿಸಿದರು.ಕಾಂಗ್ರೆಸ್ ಪಾಲಾಗಿರುವ ಖಾತೆಗಳು ಗೃಹ, ಜಲ ಸಂಪನ್ಮೂಲ, ಬೃಹತ್ ಕೈಗಾರಿಕೆ, ವೈದ್ಯಕೀಯ ಶಿಕ್ಷಣ, ಬೆಂಗಳೂರು ಅಭಿವೃದ್ದಿ, ಕಂದಾಯ, ಆರೋಗ್ಯ, ವಸತಿ, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ದಿ, ಸಮಾಜ ಕಲ್ಯಾಣ, ಗಣಿ ಮತ್ತು ಭೂ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಕಾನೂನು ಮತ್ತು ಸಂಸದೀಯ, ಮುಜರಾಯಿ, ಕೃಷಿ, ಅಲ್ಪಸಂಖ್ಯಾತ ಮತ್ತು ವಕ್ಪ್ , ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಜೆಡಿಎಸ್ ಪಡೆದ ಖಾತೆಗಳುಹಣಕಾಸು, ಇಂಧನ, ಲೋಕೋಪಯೋಗಿ, ಸಾರಿಗೆ, ಅಬಕಾರಿ, ಉನ್ನತ ಶಿಕ್ಷಣ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಪಶುಸಂಗೋಪನೆ, ಸಣ್ಣ ಕೈಗಾರಿಕೆ, ತೋಟಗಾರಿಕೆ, ಮಾಹಿತಿ ತಂತ್ರಜ್ಞಾನ, ಸಹಕಾರ, ಪ್ರವಾಸೋದ್ಯಮ, ರೇಷ್ಮೆ ಇಲಾಖೆ, ಯೋಜನೆ, ಸಣ್ಣ ನೀರಾವರಿ.