ಕುಶಾಲನಗರ, ಮೇ 31: ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅಂಗಡಿ ಮಳಿಗೆಗಳಿಗೆ ಧಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡರು.
ಪಂಚಾಯ್ತಿ ಅಧಿಕಾರಿಗಳಾದ ಸತೀಶ್ ಮತ್ತು ಸದಾಶಿವಮೂರ್ತಿ ನೇತೃತ್ವದಲ್ಲಿ ಪೌರಕಾರ್ಮಿಕರ ತಂಡ ಪಟ್ಟಣ ವ್ಯಾಪ್ತಿಯ ಅಂಗಡಿ ಮಳಿಗೆಗಳಿಗೆ ದಿಢೀರ್ ಧಾಳಿ ನಡೆಸಿ ಸಂಗ್ರಹಿಸಿಟ್ಟಿದ್ದ ಪ್ಲಾಸ್ಟಿಕ್ ಚೀಲಗಳನ್ನು ವಶಕ್ಕೆ ಪಡೆದು ಸ್ಥಳದಲ್ಲೇ ದಂಡ ವಿಧಿಸಿ ಕ್ರಮ ಕೈಗೊಂಡರು.