ನಾಪೆÇೀಕ್ಲು, ಮೇ 31: ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದರೆ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದು ಪದಾರ್ಥಿ ಸಮಾಜದ ಅಧ್ಯಕ್ಷ ಪಿ.ಆರ್. ದಾಮೋದರ ಅಭಿಪ್ರಾಯಪಟ್ಟರು.
ಗೋಣಿಕೊಪ್ಪದಲ್ಲಿ ನಡೆದ ಸಮಾಜದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜದ ಎಲ್ಲಾ ಮಕ್ಕಳಿಗೂ ಉನ್ನತ ಶಿಕ್ಷಣ ಲಭಿಸುವಂತಾಗಬೇಕು ಎಂದರು. ಎಲ್ಲಾ ಸಮಾಜ ಬಾಂಧವರು ಸಮಾಜದಲ್ಲಿ ತಮ್ಮ ಸದಸ್ಯತ್ವ ನೋಂದಾವಣಿ ಮಾಡಿಸಿಕೊಳ್ಳುವದರ ಮೂಲಕ ಸಮಾಜದ ಏಳಿಗೆಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.
ಸಮಾಜದ ವತಿಯಿಂದ ಮರಣ ನಿಧಿ ಮತ್ತು ವಿದ್ಯಾನಿಧಿಯನ್ನು ಸ್ಥಾಪಿಸಲಾಗಿದ್ದು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ವೇದಿಕೆಯಲ್ಲಿ ಖಜಾಂಚಿ ಪಿ.ಆರ್. ಮುಕುಂದ, ಸದಸ್ಯರಾದ ಪಿ.ಆರ್. ಗಾಂಧಿ ರಾವ್, ಸುರೇಶ್, ಪಿ.ಎಸ್. ದಿನೇಶ್, ಪಿ.ಎನ್. ರುಕ್ಮಿಣಿ ಇದ್ದರು. ಈ ಸಂದರ್ಭ ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕಗಳಿಸಿದ ಸಮಾಜದ ಮಕ್ಕಳಿಗೆ ಪೆÇ್ರೀತ್ಸಾಹ ಧನ ನೀಡಿ ಗೌರವಿಸಲಾಯಿತು.
ಪಿ.ಪಿ. ಶ್ರೀರಕ್ಷಾ ಪ್ರಾರ್ಥನೆ, ಸಮಾಜದ ಕಾರ್ಯದರ್ಶಿ ಪಿ.ಜಿ. ಜಯಶ್ರೀ ಸ್ವಾಗತಿಸಿ, ವಂದಿಸಿದರು.