ಕುಶಾಲನಗರದ ತ್ರಿಭಾಷಾ ಸಾಹಿತಿ ದಿ. ವಿ.ಎಸ್. ರಾಮಕೃಷ್ಣ ಅವರ ಪತ್ನಿ ಸುಲೋಚನಾ ರಾಮಕೃಷ್ಣ (91) ತಾ. 30 ರಂದು ಸಂಜೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೃತರು ಓರ್ವ ಪುತ್ರನನ್ನು ಅಗಲಿದ್ದು ಅಂತ್ಯಕ್ರಿಯೆ ತಾ. 31 ರಂದು (ಇಂದು) ನಡೆಯಲಿದೆ.
ಟಕೊಡಗರಹಳ್ಳಿಯ ಅಂದಗೋವೆ ಗ್ರಾಮದ ಮೊಳ್ಳೇರ ಪೂಣಚ್ಚ (93) ತಾ. 30 ರಂದು ನಿಧನರಾದರು. ಅಂಡಮಾನ್‍ನಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಮೃತರು ಪತ್ನಿ 2 ಗಂಡು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. 31 ರಂದು (ಇಂದು) ನಡೆಯಲಿದೆ.