ಕೂಡಿಗೆ, ಮೇ 30: ಹರಿಯಾಣ ರಾಜ್ಯದಿಂದ ಕೇರಳದ ಕಾಸರಗೋಡು ಬಳಿಯ ಕಾಂಞಗಾಡ್ ಫಾರಂ ವೊಂದಕ್ಕೆ ಹೈಬ್ರಿಡ್ ತಳಿಯ ಮರಿ ಕೋಣಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಗುಡ್ಡೆಹೊಸೂರು ಬಳಿ ತಡೆದ ಹಿಂದೂಪರ ಸಂಘಟನೆಗಳ ಮುಖಂಡರು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಠಾಣಾಧಿಕಾರಿ ನವೀನ್‍ಗೌಡ ಚಾಲಕ ಸೇರಿದಂತೆ ಲಾರಿ ಸಮೇತ 30 ಮರಿ ಕೋಣಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಎಲ್ಲಾ ಮರಿಕೋಣಗಳಿಗೆ ಗುರುತಿನ ಓಲೆಗಳನ್ನು ಒಂದೊಂದು ಕಿವಿಗೆ ಹಾಕಲಾಗಿದೆ. ಈ ಕೋಣಗಳನ್ನು ಉತ್ತರ ಹರಿಯಾಣ ರಾಜ್ಯದಿಂದ ಕೇರಳಕ್ಕೆ ತರುತ್ತಿರುವದಾಗಿಯೂ ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ದಾಖಲೆಗಳು ತಮ್ಮ ಬಳಿ ಇರುವದಾಗಿಯೂ ಈ ಸಂದರ್ಭದಲ್ಲಿ ಚಾಲಕ ಪೊಲೀಸರಿಗೆ ತಿಳಿಸಲಾಗಿ, ದಾಖಲೆಗಳ ಪರಿಶೀಲನೆ ನಡೆಸಿದ ಪೊಲೀಸರು ಮೂಕಜೀವಿ ಗಳನ್ನು ಹೆಚ್ಚಾಗಿ ಒಂದೇ ವಾಹನದಲ್ಲಿ ಕೊಂಡೊಯ್ಯುತ್ತಿರುವ ಬಗ್ಗೆ ಕಾನೂನು ಪ್ರಕಾರ ದಂಡ ವಿಧಿಸಿ ನಂತರ ಲಾರಿಯನ್ನು ಬಿಡುಗಡೆ ಮಾಡಿದರು.

ಹಿಂದೂಪರ ಸಂಘನೆಗಳ ಮುಖಂಡರಾದ ಅನೀಶ್, ರಾಜು, ಸಂತೋಷ್, ರಾಮಚಂದ್ರ, ಅಜೇಶ್, ಶಶಿಧರ್ ಮುಂತಾದವರು ಲಾರಿ ತಡೆದ ಕಾರ್ಯಾಚರಣೆಯಲ್ಲಿದ್ದರು.