ಗೋಣಿಕೊಪ್ಪಲು, ಮೇ 30 : ಮದ್ಯದಲ್ಲಿ ವಿಷ ಬೆರೆಸಿ ಕುಡಿದು ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಬುಧವಾರ ಅರುವತ್ತೊಕಲು ಪಿಎಚ್‍ಎಸ್ ಕಾಲೋನಿಯಲ್ಲಿ ಜರುಗಿದೆ. ಮಣಿಕಂಠ (32) ಆತ್ಮಹತ್ಯೆ ಮಾಡಿಕೊಂಡವರು.

ಬೆಳಿಗ್ಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಮನೆಯಿಂದ ಹೊರಟ ವ್ಯಕ್ತಿ ಅಲ್ಲಿನ ಮೈದಾನದಲ್ಲಿ ವಿಷಕುಡಿದು ಒದ್ದಾಡುತ್ತಿದ್ದರು ಎನ್ನಲಾಗಿದೆ. ಕೂಡಲೆ ಚಿಕತ್ಸೆಗೆ ಆಸ್ಪತ್ರೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಗೋಣಿಕೊಪ್ಪಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.