ಮಡಿಕೇರಿ, ಮೇ 31: ಭಾರತ ದೇಶದ ಕ್ರೀಡಾ ಸ್ಪರ್ಧಾಳು ಡಾ. ಕೊದಂಡ ಎಂ. ಮುತ್ತಯ್ಯ ಅವರ ಅಭಿಪ್ರಾಯ ಮತ್ತು ಅವರ ಹೆಸರಿನಲ್ಲಿ ನಾಲ್ಕು ಕೊಡವ ಯುವಕರಿಗೆ ಜರ್ಮನಿಯಲ್ಲಿ ತರಬೇತಿ ಪಡೆದಿರುವ ಎರಡು ತರಬೇತುದಾರರಿಂದ ತರಬೇತಿ ಕೊಟ್ಟು ಮುಂದೆ ವಿಶ್ವಮಟ್ಟದ ಹಾಗೂ ಒಲಿಂಪಿಕ್ಸ್ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ತರಬೇತಿ ನೀಡಲು ಚಿಂತನೆ ನಡೆಸಲಾಗಿದೆ.
ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಚಿನ್ನದ ಪದಕ ಪಡೆದವರಿಗೆ 5 ಕೋಟಿ ಹಣ ಬಹುಮಾನವಾಗಿ ದೊರೆಯುತ್ತದೆ. ಈ ನಿಟ್ಟಿನಲ್ಲಿ ಆಯ್ದ ನಾಲ್ಕು ಕೊಡವ ಯುವಕರಿಗೆ ತರಬೇತಿ ನೀಡಲಾಗುವದು ಎಂದು ಜೋಡುಬೀಟಿಯ ಕೆ.ಬಿ. ಬೆಳ್ಯಪ್ಪ ಅವರು ತಿಳಿಸಿದ್ದಾರೆ. ಈ ಕುರಿತ ಷರತ್ತು ಮಾಹಿತಿಗೆ ಮೊ. 9480424252 ಸಂಪರ್ಕಿಸಬಹುದು.