ಮಡಿಕೇರಿ, ಮೇ 30: ಜೀವನದಿ ಕಾವೇರಿಗೆ ಗಂಗಾ, ಯಮುನಾದಂತೆ ಜೀವಂತ ವ್ಯಾಪ್ತಿಯ ಶಾಸನ ಹಕ್ಕು ಜಾರಿಯಾಗಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯಿಂದ ಹಮ್ಮಿಕೊಂಡಿರುವ ಜಾಥಾ ಇಂದು ತಮಿಳುನಾಡಿನ ಕುಂಭಕೋಣಂ ತಲಪಿತು. ಅಲ್ಲಿನ ಮೈಲಾಡುದೊರೈ ರೈತ ಸಂಘಟನೆ ಯವರು ಜಾಥಾವನ್ನು ಬರಮಾಡಿ ಕೊಂಡರು. ನಂತರ ನಡೆದ ಸಭೆಯಲ್ಲಿ ಸಿಎನ್‍ಸಿ ಅಧ್ಯಕ್ಷ ನಾಚಪ್ಪ ತಮ್ಮ ಉದ್ದೇಶದ ಬಗ್ಗೆ ಸವಿವರವಾಗಿ ಮಾತ ನಾಡಿದರು. ಹಿರಿಯ ರೈತ ಮುಖಂಡ ಪೆರಿಯಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ. ಕವಿಪ್ರಿಯ ಸ್ವಾಗತಿಸಿದರು. ಅರುಪತಿ ಕಲ್ಯಾಣಂ ಮಾತನಾಡಿದರು.