ನಾಪೆÇೀಕ್ಲು, ಮೇ. 30: ನಾಪೆÇೀಕ್ಲು ವ್ಯಾಪ್ತಿಯ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ನಾಪೆÇೀಕ್ಲು ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಕ್ಯಾಂಡಲ್ ಉರಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾನವ ಹಕ್ಕು ಆಯೋಗದ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಜಿಲ್ಲಾಧ್ಯಕ್ಷ ಬಿದ್ದಾಟಂಡ ಜಿನ್ನು ನಾಣಯ್ಯ ಕಳೆದ 10 ದಿನಗಳಿಂದ ನಾಪೆÇೀಕ್ಲು ವಿಭಾಗದ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಇಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದರು. ವಿದ್ಯುತ್ ಇಲಾಖಾಧಿಕಾರಿಗಳು ಈ ಬಗ್ಗೆ ಯಾವದೇ ಸೂಕ್ತ ಕ್ರಮಕೈಗೊಂಡಿಲ್ಲ. ಕೂಡಲೇ ವಿದ್ಯುತ್ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳದಿದ್ದರೆ ಶುಕ್ರವಾರ ಮಡಿಕೇರಿಯ ಸೆಸ್ಕ್ ಇಲಾಖೆಯ ಕಚೇರಿಗೆ ಸಾರ್ವಜನಿಕರ ಸಹಕಾರದೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವದು ಎಂದು ಎಚ್ಚರಿಸಿದರು.
ಈ ಸಂದರ್ಭ ಕೇಟೋಳಿರ ಹರೀಶ್ ಪೂವಯ್ಯ, ಅರೆಯಡ ಅಶೋಕ್, ಕಾಂಡಂಡ ಜಯ ಕರುಂಬಯ್ಯ, ನೂರಂಬಡ ಉದಯ ಶಂಕರ್, ಚೀಯಕಪೂವಂಡ ಸತೀಶ್, ಕುಂಡ್ಯೋಳಂಡ ಸಂಪತ್, ಕುಲ್ಲೇಟಿರ ನಂದ ನಾಚಪ್ಪ, ನಾಗರಾಜ್, ಅಚ್ಚಾಂಡಿರ ಸಾಬು ದೇವಯ್ಯ, ಗಣೇಶ್, ಪುಲ್ಲೇರ ಪದ್ಮಿನಿ, ಅಬ್ದುಲ್ ರಜಾಕ್, ಮಂಜು, ಮಣಿ, ಮತ್ತಿತರರು ಇದ್ದರು.