ಮಡಿಕೇರಿ, ಮೇ 30: ವಿವಿಧ ಕೊಡವ ಸಮಾಜಗಳಿಂದ ಪ್ರತಿನಿಧಿತವಾಗಿರುವ ಫೆÉಡರೇಷನ್ ಆಫ್ ಕೊಡವ ಸಮಾಜಾಸ್, ಬಾಳುಗೋಡು, ಇವರಿಂದ ಅಧಿಕಾರಸ್ತರಾದ, ಬೆಂಗಳೂರಿನ ಕೊಡವ ಸಮಾಜದವರು, ಇತ್ತೀಚೆಗೆ ಕೊಡವ ಜನಾಂಗದ ಕೋವಿ ಹಕ್ಕಿನ ಬಗ್ಗೆ ಕ್ಯಾಪ್ಟನ್ ವೈ.ಕೆ. ಚೇತನ್ (ನಿವೃತ್ತ) ಇವರಿಂದ ಸಲ್ಲಿತವಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಎದುರಾಗಿ, ಕೊಡವ ಸಮಾಜ ಬೆಂಗಳೂರು ಇವರು ಇಂಪ್ಲೀಡಿಂಗ್ (Imಠಿಟeಚಿಜiಟಿg) ಅರ್ಜಿಯನ್ನು ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಇಲ್ಲಿ ಇತ್ತೀಚೆಗೆ ಸಲ್ಲಿಸಿದೆ.

ಈ ಮೊದಲು 2015 ರಲ್ಲಿ ಸದರಿ ವಿಷಯದ ಬಗ್ಗೆ ತಕರಾರು ಸಲ್ಲಿಸಿದ್ದಾಗ ಫೆಡರೇಷನ್ ಆಫ್ ಕೊಡವ ಸಮಾಜಾಸ್ ಬೆಂಗಳೂರು ಕೊಡವ ಸಮಾಜಕ್ಕೆ ಸದರಿ ವಿಷಯದ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲು ಒಪ್ಪಿಗೆ ನೀಡಿದಂತೆ ಕೇಂದ್ರ ಸರ್ಕಾರದ ಗೃಹ ಮಂತ್ರಿಗಳು ಹಾಗೂ ಕರ್ನಾಟಕದ ಬಹುತೇಕ ಮಂತ್ರಿಗಳನ್ನು ಸಂಪರ್ಕಿಸಿ ಸದರಿ ದೂರು ಸರಿಯಲ್ಲವೆಂದು ವಿವರ ಸಲ್ಲಿಸಿಲಾಗಿದೆ. ಇದಕ್ಕೆ ಮೊದಲು ಮಾಜಿ ಕಾನೂನು ಸಚಿವ ಮೇರಿಯಂಡ ನಾಣಯ್ಯ ಅವರ ಸಲಹೆಯನ್ನು ಸಹ ಪಡೆಯಲಾಗಿದೆ.

ಭಾರತೀಯ ಮದ್ದುಗುಂಡು ಕಾಯ್ದೆ 1959 ರ ವಿಭಾಗ 3 ಹಾಗು 4 ರ ಪ್ರಕಾರ ಕೇಂದ್ರ ಸರಕಾರದಿಂದ ಮಂಜೂರಾಗಿರತಕ್ಕ ಹಾಗೂ ಗುರುತಿಸಲಾಗಿರುವಂತೆ “ಇveಡಿಥಿ ಠಿeಡಿsoಟಿ oಜಿ ಅooಡಿg ಖಚಿಛಿe &amdiv; ಇveಡಿಥಿ ಎಚಿmmಚಿ ಖಿeಟಿuಡಿe ಊoಟಜeಡಿs iಟಿ ಅooಡಿg” ರಂತೆ ಪರವಾನಗಿಯನ್ನು ಹೊಂದಲು ಹಾಗೂ ಬಂದೂಕು ಮದ್ದು ಗುಂಡುಗಳನ್ನು ಹೊಂದಲು ಬದ್ದರಾಗಿರುತ್ತಾರೆ. ಸದರಿ ವಿಷಯದ ಬಗ್ಗೆ ಕಾನೂನಾತ್ಮಕ ನಿರ್ದಿಷ್ಟತೆ ಹಾಗೂ ಕೇಂದ್ರ ಸರಕಾರದಿಂದ ನೀಡಿರುವ ವಿನಾಯಿತಿ ಕುರಿತು ಚೇತನ್ ಸಾರ್ವಜನಿಕ ಹಿತಾಸಕ್ತಿಯನ್ನು ಸಲ್ಲಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಎದುರಾಗಿ ಕೊಡವ ಸಮಾಜ ಬೆಂಗಳೂರು ಮತ್ತು ಫೆಡರೇಷನ್ ಆಫ್ ಕೊಡವ ಸಮಾಜಾಸ್ ಪರವಾಗಿ ಅಧಿಕಾರಸ್ತರಾದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಮಂಡೇಡ ರವಿ ಉತ್ತಪ್ಪ ಅವರು ಇಂಪ್ಲೀಡಿಂಗ್ ಅರ್ಜಿಗೆ ಸಹಿ ಹಾಕಿ ಸಲ್ಲಿಸಿರುತ್ತಾರೆ.

ಈ ಕೆಳಕಂಡ ಕಾನೂನು ಸಲಹೆಗಾರರು ಬೆಂಗಳೂರಿನ ಕರ್ನಾಟಕ ಉಚ್ಚನ್ಯಾಯಾಲದಲ್ಲಿ ಇಂಪ್ಲೀಡಿಂಗ್ ಅರ್ಜಿಸಲ್ಲಿಕೆಯಲ್ಲಿ ಕೊಡವ ಸಮಾಜ ಬೆಂಗಳೂರನ್ನು ಕಾಳೇಂಗಡ ಸರೋಜಿನಿ ಮುತ್ತಣ್ಣ, ಐತಿಚಂಡ ಎಂ.ದೇವಯ್ಯ ಅಧ್ಯಕ್ಷ (ಲೀಗಲ್ ಕಮಿಟಿ, ಕೊಡವ ಸಮಾಜ ಬೆಂಗಳೂರು), ಕಾಂಗಿರ ಎಸ್.ಭೀಮಯ್ಯ, ಮಲ್ಲೇಂಗಡ ಗಗನ್ ಗಣಪತಿ, ಪುಲಿಯಂಡ ಅನು ಚಂಗಪ್ಪ, ಕರವಟ್ಟಿರ ಟಿ.ಪೆಮ್ಮಯ್ಯ, ಕರ್ನಂಡ ರಾಹುಲ್ ಕಾರ್ಯಪ್ಪ, ಕಾಳೇಂಗಡ ಎಂ.ಮಾದಯ್ಯ, ಹಾಗೂ ಮುಕ್ಕಾಟೀರ ಎಂ.ಅಶೋಕ್ ಪ್ರತಿನಿಧಿಸಲಿದ್ದಾರೆ.