ಮಡಿಕೇರಿ, ಮೇ 29: ನಗರದ ಜಿಲ್ಲಾಸ್ಪತ್ರೆಯಲ್ಲಿ ಕ್ಷಯರೋಗ ಪತ್ತೆ ಹಚ್ಚುವ ನೂತನ ಘಟಕ ಸಿ.ಬಿ. ನ್ಯಾಟ್‍ನ್ನು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಉದ್ಘಾಟನೆ ಮಾಡಿದರು. ಸಿಬಿ ನ್ಯಾಟ್ ಎಂಬುದು ಕ್ಷಯರೋಗ ಪತ್ತೆ ಹಚ್ಚುವ ನೂತನ ಮತ್ತು ಅತ್ಯಾಧುನಿಕ ವಿಧಾನವಾಗಿದೆ. ಸಿ.ಬಿ. ನ್ಯಾಟ್ ಅತ್ಯಾಧುನಿಕ ವಿಧಾನದಿಂದ ಕ್ಷಯ ರೋಗವನ್ನು ಎರಡು ಗಂಟೆ ಅವಧಿಯಲ್ಲಿ ಪತ್ತೆ ಹಚ್ಚಬಹುದಾಗಿದೆ. ಈ ಯಂತ್ರದ ಮೂಲಕ ದೇಹದ ರಕ್ತ, ಮಲ ಮತ್ತು ಮೂತ್ರವನ್ನು ಹೊರತುಪಡಿಸಿ ದೇಹದ ಎಲ್ಲಾ ರೀತಿಯ ದ್ರವ ವಸ್ತುಗಳನ್ನು ನೀಡಿ ಕ್ಷಯರೋಗ ಪತ್ತೆಹಚ್ಚಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ತಿಳಿಸಿದರು.

ಸಿ.ಬಿ. ನ್ಯಾಟ್ ಯಂತ್ರದ ಮೂಲಕ ಆರ್‍ಎಂಪಿ ಕ್ಷಯರೋಗ ನಿರೋಧ ಔಷಧಿಯ ರೋಗ ನಿರೋಧಕತೆಯನ್ನು ಸಹ ಪತ್ತೆಹಚ್ಚಬಹುದು, ಔಷಧ ರೋಗ ನಿರೋಧಕತೆಯನ್ನು ಪತ್ತೆ ಹಚ್ಚಬಹುದಾಗಿದೆ ಎಂದು ತಿಳಿಸಿದರು.