ಶನಿವಾರಸಂತೆ, ಮೇ 29: ಆಲೂರು-ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕನಹಳ್ಳಿಯಲ್ಲಿರುವ ಬಿ.ಎಸ್.ಎನ್.ಎಲ್. ಟವರ್ ಪದೇ ಪದೇ ರಿಪೇರಿಯಾಗುತ್ತಿರುವ ಬಗ್ಗೆ ಗ್ರಾಮಸ್ಥರು ಬಿ.ಎಸ್.ಎನ್.ಎಲ್. ಕಚೇರಿಗೆ ದೂರು ಸಲ್ಲಿಸಿದ್ದಾರೆ. ಬಿ.ಎಸ್.ಎನ್.ಎಲ್. ಟವರ್ ಪದೇ ಪದೇ ರಿಪೇರಿಯಾಗುತ್ತಿದ್ದು, ಈ ಟವರ್‍ನ ಯಂತ್ರಗಳನ್ನು ಬದಲಾಯಿಸಿ ಹೊಸ ಯಂತ್ರವನ್ನು ಹಾಕಿಸಿ ಗ್ರಾಮಸ್ಥರಿಗೆ ಸೂಕ್ತ ಸಂಪರ್ಕ ವ್ಯವಸ್ಥೆಗೆ ಅವಕಾಶ ಮಾಡಿಕೊಡಲು 8 ದಿನಗಳ ಒಳಗಡೆ ಬಿ.ಎಸ್.ಎನ್.ಎಲ್. ಅಧಿಕಾರಿಗಳು ಸರಿಯಾದ ವ್ಯವಸ್ಥೆ ಮಾಡದಿದ್ದರೆ ಗ್ರಾಮಸ್ಥರು ಬಿ.ಎಸ್.ಎನ್.ಎಲ್. ಟವರ್ ರೂಮಿಗೆ ಬೀಗ ಜಡಿಯುತ್ತೇವೆ ಎಂದು ಎಚ್ಚರಿಸಿದ್ದಾರೆ.