ಶನಿವಾರಸಂತೆ, ಮೇ 26: ಜೆ.ಡಿ.ಎಸ್. - ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿಯಾಗಿ ಡಾ. ಪರಮೇಶ್ವರ್ ಪ್ರಮಾಣವಚನ ಸ್ವೀಕರಿಸಿದ ಪ್ರಯುಕ್ತ ಪಟ್ಟಣದಲ್ಲಿ ಜೆ.ಡಿ.ಎಸ್. ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್ ಪರ ಜಯಘೋಷ ಮಾಡಿದರು. ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭ ಜೆ.ಡಿ.ಎಸ್. ಹೋಬಳಿ ಘಟಕದ ಅಧ್ಯಕ್ಷ ಎಂ.ಯು. ಆದಿಪ್ ಪಾಶ, ಮುಖಂಡರಾದ ಡಿ.ಪಿ. ಬೋಜಪ್ಪ, ಎನ್.ಕೆ. ಅಪ್ಪಸ್ವಾಮಿ ಮಾತನಾಡಿದರು.

ಪ್ರಮುಖರಾದ ಮುತ್ತೇಗೌಡ, ಕೆ.ಎಸ್. ಚನ್ನಬಸಪ್ಪ, ಮತ್ತೂರು ಮಹೇಶ್, ಪ್ರಸನ್ನ, ಸಿ.ಜೆ. ಗಿರೀಶ್, ಬೆಳ್ಳಿಯಪ್ಪ, ಸರ್ದಾರ್ ಅಹಮ್ಮದ್, ಬಸವರಾಜ್ ಬೆಳ್ಳಿ, ಜಗನ್ ಪಾಲ್, ಕುಸುಮಾ, ಚಿಕ್ಕಣ್ಣ, ಉಮೇಶ್, ದಿನೇಶ್, ಪಿ.ಡಿ. ರವಿ, ದೇವು, ಹರೀಶ್, ಸುಬ್ರಮಣ್ಯ, ಅಕ್ಮಲ್ ಪಾಶ, ಎನ್.ಕೆ. ಮೂರ್ತಿ, ಎನ್.ಕೆ. ಕುಶಾಲ, ಸಣ್ಣಯ್ಯ ಇತರ ಕಾರ್ಯಕರ್ತರು ಹಾಜರಿದ್ದರು.

ದುಂಡಳ್ಳಿ

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಸಾಬೀತು ಪಡಿಸಿದ ಕಾರಣ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆ.ಡಿ.ಎಸ್. ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಸಭಾಧ್ಯಕ್ಷರಾಗಿ ರಮೇಶ್‍ಕುಮಾರ್ ಅವಿರೋಧ ಆಯ್ಕೆ ಹಾಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಗೆದ್ದ ಸುದ್ದಿ ತಿಳಿಯುತ್ತಿದ್ದಂತೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭ ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಜೆ. ಗಿರೀಶ್ ಮಾತನಾಡಿದರು. ಪ್ರಮುಖರಾದ ಡಿ.ಪಿ. ಬೋಜಪ್ಪ, ಸಿ.ಕೆ. ಕೊಮಾರಪ್ಪ, ಎ.ಎಂ. ಆನಂದ್, ಎನ್.ಕೆ. ಅಪ್ಪಸ್ವಾಮಿ, ಗಣಪತಿ, ಹರೀಶ್, ಬೆಳ್ಳಿಯಪ್ಪ, ಚಂದ್ರಪ್ಪ, ವಸಂತ್ ಇತರ ಕಾರ್ಯಕರ್ತರು ಹಾಗೂ ಪಂಚಾಯಿತಿಯ ಕೆಲ ಸದಸ್ಯರು ಹಾಜರಿದ್ದರು.