ಗೋಣಿಕೊಪ್ಪ ವರದಿ, ಮೇ 25 : ಕೊಡಗು ಬಲಿಜ ಸಮಾಜದ ವೀರಾಜಪೇಟೆ ತಾಲೂಕು ಗೌರವ ಅಧ್ಯಕ್ಷರಾಗಿ ನಾರಾಯಣಸ್ವಾಮಿ ನಾಯ್ಡು, ಹಂಗಾಮಿ ಅಧ್ಯಕ್ಷರನ್ನಾಗಿ ಎಸ್. ಕೆ. ಯತಿರಾಜ್‍ನಾಯ್ಡು ಅವರನ್ನು ಆಯ್ಕೆ ಮಾಡಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಬಲಿಜ ಸಮಾಜ ಅಧ್ಯಕ್ಷ ಟಿ. ಎಲ್. ಶ್ರೀನಿವಾಸ್, ಬಲಿಜ ಕ್ರೀಡಾಕೂಟ ನಡೆಯುತ್ತಿರುವದರಿಂದ ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕ್ರೀಡಾಕೂಟ ನಡೆದ ನಂತರ ತುರ್ತುಸಭೆ ಕರೆದು ಆಯ್ಕೆ ನಡೆಸಲಾಗುವದು ಎಂದು ತಿಳಿಸಿದ್ದಾರೆ.