ಗೋಣಿಕೊಪ್ಪ ವರದಿ, ಮೇ 25 : ಕೊಡಗು ಬಲಿಜ ಸಮಾಜದ ಕ್ರೀಡೋತ್ಸವ ಲಾಂಛನವನ್ನು ತಾಲೂಕು ಬಲಿಜ ಸಮಾಜ ಗೌರವ ಅಧ್ಯಕ್ಷ ನಾರಾಯಣಸ್ವಾಮಿ ನಾಯ್ಡು ಬಿಡುಗಡೆಗೊಳಿಸಿದರು.

ಹಾತೂರು ಫೀ. ಮಾ. ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಾವಿದ ಬಿ. ಆರ್. ಸತೀಶ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಬಲಿಜ ಸಮಾಜ ಅಧ್ಯಕ್ಷ ಟಿ. ಎಲ್. ಶ್ರೀನಿವಾಸ್, ವೀರಾಜಪೇಟೆ ತಾಲೂಕು ಹಂಗಾಮಿ ಅಧ್ಯಕ್ಷರನ್ನಾಗಿ ಎಸ್. ಕೆ. ಯತಿರಾಜ್‍ನಾಯ್ಡು, ಪ್ರ. ಕಾರ್ಯದರ್ಶಿ ಗೀತಾನಾಯ್ಡು, ಗೌ. ಕಾರ್ಯದರ್ಶಿ ಗಣೇಶ್, ನಿರ್ದೇಶಕ ವಿಜಯ ಉಪಸ್ಥಿತರಿದ್ದರು.

ಇಂದಿನಿಂದ ಕ್ರೀಡೋತ್ಸವ

ಬಲಿಜ ಕ್ರೀಡೋತ್ಸವ ಇಂದಿನಿಂದ ಹಾತೂರು ಫೀ. ಮಾ. ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ಆರಂಭಗೊಳ್ಳಲಿದೆ.

ಬೆ. 10.30 ಕ್ಕೆ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ಟಿ.ಎಲ್.ಶ್ರೀನಿವಾಸ್, ಸಭಾಧ್ಯಕ್ಷತೆ ಮೂರ್ನಾಡುವಿನ ಟಿ.ಎನ್. ಲೋಕನಾಥ್ ವಹಿಸಲಿದ್ದು ಬೆಂಗಳೂರು ಮಾಜಿ ಬಿಬಿಎಂಪಿ ಮೇಯರ್ ಜಿ.ಪದ್ಮಾವತಿ, ಮಾಜಿ ಶಾಸಕ ಆರ್.ವಿ.ದೇವರಾಜು, ಕರ್ನಾಟಕ ರಾಜ್ಯ ಬಲಿಜ ಸಂಘ ಉಪಾಧ್ಯಕ್ಷ ರವಿನಾಯ್ಡು, ಕೊಡಗು ಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಮಾಜಿ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್, ಕರ್ನಾಟಕ ಪ್ರದೇಶ ಬಲಿಜ ಸಂಘ ಅಧ್ಯಕ್ಷ ಪೆರಿಕಲ್ ಎಂ.ಸುಂದರ್, ವೀರಾಜಪೇಟೆ ಡಿವೈಎಸ್‍ಪಿ ನಾಗಪ್ಪ, ಬಲಿಜ ಸಮುದಾಯದ ಪ್ರಮುಖರಾದ ಮಂಜುಳಾ ನಾಯ್ಡು, ಮೀನಾ ತೂಗುದೀಪ ಶ್ರೀನಿವಾಸ್, ಮಮತಾ ದೇವರಾಜ್, ಚಲನಚಿತ್ರ ನಟ ಇಶಾನ್, ಮೈಸೂರಿನ ರೇಣುಲ್ ಹೇಮಂತ್‍ಕುಮಾರ್, ಬಲಿಜ ಬಿಂಬ ಸಂಪಾದಕ ಎನ್.ಸಂಜೀವಪ್ಪ, ಭದ್ರಾವತಿ ತಾಲೂಕು ಬಲಿಜ ಸಂಘದ ಅಧ್ಯಕ್ಷ ಎಸ್.ಎನ್.ಸುಬ್ರಮಣ್ಯ, ಮೈಸೂರಿನ ಹೇಮಂತ್‍ಕುಮಾರ್, ಬೆಂಗಳೂರಿನ ಮುನಿರಾಜು, ಚಾಮರಾಜನಗರ ಜಿಲ್ಲೆಯ ಬಲಿಜ ಮುಖಂಡ ಶ್ರೀಕಾಂತ್, ಬೆಂಗಳೂರಿನ ಬಲಿಜ ಅಭಿಮಾನಿ ಫ್ಲವರ್ ವೆಂಕಟೇಶ್, ಕೊಡಗು ಬಲಿಜ ಸಮಾಜದ ಪ್ರಧಾನ ಕಾರ್ಯದರ್ಶಿ ಗೀತಾ ನಾಯ್ಡು, ಉಪಾಧ್ಯಕ್ಷರಾದ ಟಿ.ವಿ.ಲೋಕೇಶ್, ಯತಿರಾಜು ನಾಯ್ಡು ಹಾಗೂ ಗೀತಾ ಹರೀಶ್ ಗೌರವ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ.

ಈ ಸಂದರ್ಭ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಡಗು ಬಲಿಜ ಸಮಾಜ ಆರೆಂಜ್ ತಂಡಗಳ ನಡುವೆ ಇದೇ ಸಂದರ್ಭ ತಲಾ 5 ಓವರ್‍ಗಳ ಕ್ರಿಕೆಟ್ ಪ್ರದರ್ಶನ ಪಂದ್ಯಾಟ ನಡೆಯಲಿದೆ.