ಮಡಿಕೇರಿ, ಮೇ 25: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯಲ್ಲಿ ನಿಫಾ ಕಾಯಿಲೆಯ ಮುಂಜಾಗ್ರತಾ ಕ್ರಮವಹಿಸುವ ಬಗ್ಗೆ ಮತ್ತು ಆಸ್ಪತ್ರೆಗೆ ಬರುವಂತಹ ರೋಗಿಗಳನ್ನು ಉಪಚರಿಸುವ ಬಗ್ಗೆ ಆಸ್ಪತ್ರೆಯ ಶುಶ್ರೂಷಕರಿಗೆ, ವೈದ್ಯರಿಗೆ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ತರಬೇತಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಡಾ. ರಾಮಚಂದ್ರ ಕಾಮತ್ ಸಮುದಾಯ ವೈದ್ಯ ಶಾಸ್ತ್ರ ಮುಖ್ಯಸ್ಥರು, ಡಾ. ವಿಜಯಕುಮಾರ್, ಅಣುಜೀವಿ ಶಾಸ್ತ್ರ ಪ್ರಾಧ್ಯಾಪಕರು, ಡಾ. ಹೆಚ್.ಹೆಚ್. ಮಹೇಶ್ ಮತ್ತು ಡಾ. ಶ್ಯಾಮಲ ಅವರುಗಳು ಉಪನ್ಯಾಸ ನೀಡಿದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಕೆ.ಬಿ. ಕಾರ್ಯಪ್ಪ, ಸಂಸ್ಥೆಯ ಬೋಧಕ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಕೆ. ಜಗದೀಶ್, ಶುಶ್ರೂಷಕ ಅಧೀಕ್ಷಕಿ ಮೀನಕುಮಾರಿ, ಆಸ್ಪತ್ರೆಯ ವೈದ್ಯರುಗಳು, ಶುಶ್ರೂಷಕ ವೃಂದದವರು, ಬೋಧಕೇತರ ಸಿಬ್ಬಂದಿ ಮತ್ತು ವೈದ್ಯ ವಿದ್ಯಾರ್ಥಿಗಳು ಹಾಜರಿದ್ದರು.