ಸುಂಟಿಕೊಪ್ಪ, ಮೇ 25: ಲಯನ್ಸ್ ಸಂಸ್ಥೆ ಸೇವಾ ಮನೋಭಾವನೆಯಿಂದ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದು, ಇನ್ನಷ್ಟು ಮಂದಿ ಸದಸ್ಯತ್ವ ಪಡೆದುಕೊಳ್ಳುವ ಮೂಲಕ ಸಂಸ್ಥೆಯ ಕೈ ಬಲ ಪಡಿಸಬೇಕು ಎಂದು ಲಯನ್ಸ್ ಜಿಲ್ಲಾ ರಾಜ್ಯಪಾಲ ಹೆಚ್.ಆರ್. ಹರೀಶ್ ಹೇಳಿದರು.

ಸುಂಟಿಕೊಪ್ಪ ಲಯನ್ಸ್ ಕ್ಲಬ್‍ಗೆ ಅಧಿಕೃತ ಭೇಟಿ ನೀಡಿದ ಅವರು ಲಯನ್ಸ್ ಸದಸ್ಯರುಗಳನ್ನು ಉದ್ದೇಶಿಸಿ ಮಾತನಾಡಿ, ಲಯನೆಸ್, ಲಯನ್ಸ್ ಸದಸ್ಯರುಗಳು ಕುಟುಂಬದ ಸದಸ್ಯರು ಗಳು ಲಯನ್ಸ್‍ನ ಶತಮಾನೋತ್ಸವ ಸಂದರ್ಭದಲ್ಲಿ ಸದಸ್ಯತ್ವ ಹೆಚ್ಚಿಸಲು ಪ್ರಯತ್ನಿಸುವ ಮೂಲಕ ಅಂಧತ್ವದ ಚಿಕಿತ್ಸೆಗೆ ಲಯನ್ಸ್ ನಡೆಸುತ್ತಿರುವ ಆಂದೋಲನಕ್ಕೆ ಕೈ ಜೋಡಿಸಬೇಕೆಂದು ಕರೆ ನೀಡಿದರು. ಲಯನ್ಸ್ ಪ್ರಾಂತೀಯ ಅಧ್ಯಕ್ಷೆ ರತ್ನಾ ಚರ್ಮಣ ಮಾತನಾಡಿ, ಲಯನ್ಸ್ ಸಂಸ್ಥೆಯ ಸಮಾಜಮುಖಿ ಕಾರ್ಯಕ್ರಮದ ಬಗ್ಗೆ ತಿಳಿ ಹೇಳಿದರು. ಲಯನ್ಸ್ ಜಿಲ್ಲಾ ಉಪರಾಜ್ಯಪಾಲರಾದ ಗೀತಾ ಪ್ರಕಾಶ್ ಲಯನ್ಸ್ ವಲಯಾಧ್ಯಕ್ಷ ಸೋಮಣ್ಣ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಕ್ಲಬ್‍ನ ಅಧ್ಯಕ್ಷ ಚೆಟ್ಟಿಮಾಡ ಕೆ. ರಕ್ಷಿತ್ ವಹಿಸಿದ್ದರು. ಲಯನ್ಸ್ ಜಿಲ್ಲಾ ರಾಜ್ಯಪಾಲ ಹರೀಶ್ ನೂತನ ಸದಸ್ಯರುಗಳಿಗೆ ಸಂಸ್ಥೆಯ ಪ್ರಮಾಣ ವಚನ ಬೋಧಿಸಿದರು. ಎಂಜೆಎಫ್ ಸದಸ್ಯತ್ವ ಪಡೆದ ಸದಸ್ಯರುಗಳನ್ನು ಸನ್ಮಾನಿಸಲಾಯಿತು. ವಿಜಯ¯ಕ್ಷ್ಮೀ ಶ್ರೀನಿವಾಸ್ ಪ್ರಾರ್ಥಿಸಿ, ಸಿ.ಕೆ. ರಕ್ಷಿತ್ ಸ್ವಾಗತಿಸಿ, ಶಶಿಕಾಂತ್ ವರದಿ ವಾಚಿಸಿ, ವಂದಿಸಿದರು.