ಮಡಿಕೇರಿ, ಮೇ 25 : ಕೊಡವ ಸಂಸ್ಕøತಿ, ಆಚಾರ, ವಿಚಾರಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸಲು ವಿವಿಧ ಸಂಘ, ಸಂಸ್ಥೆಗಳು ತರಬೇತಿ ಶಿಬಿರಗಳನ್ನು ನಡೆಸುವ ಮೂಲಕ ವೇದಿಕೆ ಕಲ್ಪಿಸಿಕೊಡುತ್ತಿದ್ದು, ಇದನ್ನು ಯುವ ಸಮೂಹ ಸದುಪಯೋಗಪಡಿಸಿಕೊಳ್ಳಬೇಕೆಂದು ಕೊಡವ ಸಮಾಜದ ಕಾರ್ಯಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ ಕರೆ ನೀಡಿದ್ದಾರೆ.

ಕೊಡವ ಮಕ್ಕಡ ಕೂಟ ಹಾಗೂ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಸಹಯೋಗದಲ್ಲಿ ನಗರದ ಜನರಲ್ ತಿಮ್ಮಯ್ಯ ಶಾಲೆಯಲ್ಲಿ 6ನೇ ವರ್ಷದ ಆಟ್ ಪಾಟ್ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಣವಟ್ಟಿರ ಚಿಣ್ಣಪ್ಪ ಹಿಂದಿನ ದಿನಗಳಲ್ಲಿ ಆಟ್ ಪಾಟ್ ನಂತಹ ಕೊಡವ ಸಂಸ್ಕøತಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಗಳಿಗೆ ವೇದಿಕೆ ಮತ್ತು ಅವಕಾಶ ಗಳಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೊಡವ ಮಕ್ಕಡ ಕೂಟ ಸೇರಿದಂತೆ ಕೆಲವು ಸಂಘ, ಸಂಸ್ಥೆಗಳು ತರಬೇತಿ ನೀಡುವ ಮೂಲಕ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ಈ ಕಾರ್ಯಕ್ಕೆ ಜನಾಂಗ ಬಾಂಧವರು ಪ್ರೋತ್ಸಾಹ ನೀಡುವ ಮೂಲಕ ಕೊಡವ ಆಚಾರ, ವಿಚಾರಗಳ ಉಳಿವಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಮಾತನಾಡಿ, ಕೂಟವು ಕಳೆದ ಐದು ವರ್ಷಗಳಿಂದ ಆಟ್ ಪಾಟ್ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ಇದಕ್ಕೆ ಸಂಬಂಧಿಸಿದ ಪುಸ್ತಕವನ್ನು ಕೂಡ ಮುದ್ರಿಸಿ ಬಿಡುಗಡೆ ಮಾಡಿದೆ ಎಂದರು. ಪ್ರಸ್ತುತ ವರ್ಷ ಕೂಡ ಮಡಿಕೇರಿಯ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ವತಿಯಿಂದ 6ನೇ ವರ್ಷದ ಆಟ್ ಪಾಟ್ ಕಾರ್ಯ ಕ್ರಮವನ್ನು ಆಯೋಜಿಸಲಾಗಿದ್ದು, 12 ದಿನಗಳ ಕಾಲ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಎಲ್ಲಾ ವಿಷಯಗಳ ಬಗ್ಗೆ ತರಬೇತಿ ನೀಡಲು ಸಾಧ್ಯವಾಗಲಿಲ್ಲ. ಆದರೆ ಸಂಸ್ಕøತಿಯ ಮೊದಲ ಹೆಜ್ಜೆಯನ್ನು ತೋರಿಸಿಕೊಡಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪೊಮ್ಮಕ್ಕಡ ಕೂಟದ ಖಜಾಂಚಿ ಉಳ್ಳಿಯಡ ನಂಜಪ್ಪ ಮಾತನಾಡಿ ಕೊಡವ ಸಂಸ್ಕøತಿ, ಪದ್ಧತಿ, ಪರಂಪರೆಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಿದಾಗ ಮಾತ್ರ ಕೊಡಗಿನ ಸಂಸ್ಕøತಿ ಉಳಿಯಲು ಸಾಧ್ಯ ಎಂದರು.

ಜನರಲ್ ತಿಮ್ಮಯ್ಯ ಶಾಲೆಯ ವ್ಯವಸ್ಥಾಪಕ ಚೋಳಂಡ ಕಾಳಪ್ಪ ಮಾತನಾಡಿ ಕೊಡವ ಮಕ್ಕಡ ಕೂಟವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುತ್ತಿರುವ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಅವರ ಕಾರ್ಯ ಶ್ಲಾಘನೀಯವೆಂದರು.

ಜನರಲ್ ತಿಮ್ಮಯ್ಯ ಶಾಲೆಯ ಪ್ರಾಂಶುಪಾಲ ಕಲ್ಮಾಡಂಡ ಸರಸ್ವತಿ ಮಾತನಾಡಿ, ಆಟ್‍ಪಾಟ್ ಕಾರ್ಯಕ್ರಮಗಳಲ್ಲಿ ತರಬೇತಿ ಪಡೆದವರು ತಮ್ಮದೇ ಆದ ವೇದಿಕೆಯನ್ನು ಸೃಷ್ಟಿಸಿಕೊಂಡು ಪ್ರತಿಭೆಯನ್ನು ಅನಾವರಣಗೊಳಿಸುವ ಪ್ರಯತ್ನ ಮಾಡಬೇಕೆಂದರು. ವಾರಕ್ಕೊಂದು ದಿನ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಆಟ್ ಪಾಟ್ ತರಬೇತಿಯನ್ನು ನೀಡಲಾಗುತ್ತಿದೆ. ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕೊಡವ ಮಕ್ಕಡ ಕೂಟ ಕೊಡವ ಸಂಸ್ಕøತಿಗೆ ಪೂರಕವಾದ ಹಲವು ಕಾರ್ಯಕ್ರಮಗಳನ್ನು ಆಯೋಜಿ ಸುತ್ತಿರುವದು ಶ್ಲಾಘನೀಯವೆಂದರು.

ಆಟ್ ಪಾಟ್ ತರಬೇತುದಾರ ನಾಪಂಡ ಈರಪ್ಪ ಮಾತನಾಡಿ, ನಮ್ಮ ಸಂಸ್ಕøತಿ, ಆಚಾರ ವಿಚಾರಗಳನ್ನು ಚಿಕ್ಕ ವಯಸ್ಸಿನ ಮಕ್ಕಳಿಗೆ ಪರಿಚಯಿಸುವಂತಾಗಬೇಕು. ಆ ನಿಟ್ಟಿನಲ್ಲಿ ಹಿರಿಯರು ಕೈ ಜೋಡಿಸಬೇಕೆಂದು ತಿಳಿಸಿದರು.

ತರಬೇತುದಾರರಾದ ಮಾಳೇಟಿರ ಪ್ರಮೀಳಾ ಜೀವನ್, ಮುಕ್ಕಾಟಿರ ಅಂಜು ಸುಬ್ರಮಣಿ, ಬೊಳ್ಳಜೀರ ಯಮುನಾ ಅಯ್ಯಪ್ಪ, ನಾಪಂಡ ಈರಪ್ಪ, ಮೇವಡ ನಾಣಯ್ಯ, ಬೊಳ್ಳಜೀರ ಬಿ.ಅಯ್ಯಪ್ಪ, ಮುಂಡಂಡ ಪೂವಯ್ಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಬೊಳಕಾಟ್, ಕೋಲಾಟ್, ಕಪ್ಪೆಯಾಟ್, ಪರೆಯಕಳಿ, ಉಮ್ಮತ್ತಾಟ್, ತಾಳ್‍ಪಾಟ್, ಸಮ್ಮಂದಡ್‍ಕ್‍ವೊ ಪ್ರದರ್ಶನದ ಮೂಲಕ ತರಬೇತಿ ಪಡೆದ ವಿದ್ಯಾರ್ಥಿಗಳು ಗಮನ ಸೆಳೆದರು. ಅತಿಥಿಗಳು ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು. ಮುಕ್ಕಾಟಿರ ಲಿಶಾ ಬೋಜಮ್ಮ ನಿರೂಪಿಸಿ, ಪೊನ್ನಚಟ್ಟಿರ ಮೊನಾಲ್ ಸ್ವಾಗತಿಸಿ, ಬಿಜ್ಜಂಡ ಕುಶ್ಮಿತ ವಂದಿಸಿದರು.