ಪೊನ್ನಂಪೇಟೆ, ಮೇ 23 : ಇದೀಗ ನೂತನ ಸರಕಾರ ರಚಿಸಲು ಜೆಡಿಎಸ್-ಕಾಂಗ್ರೆಸ್ ಸಿದ್ಧತೆ ಮಾಡಿರುವ ಹಿನ್ನೆಲೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಹೆಚ್.ಡಿ. ಕುಮಾರಸ್ವಾಮಿ ಬುಧವಾರ ಪ್ರಮಾಣ ವಚನ ಮಾಡುತ್ತಿದ್ದು, ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ವಕ್ತಾರ ಎಂ.ಟಿ. ಕಾರ್ಯಪ್ಪ ತಿಳಿಸಿದ್ದಾರೆ.
ಪೆÇನ್ನಂಪೇಟೆಯಲ್ಲಿ ಕಾರ್ಮಾಡು ಸುಬ್ಬಣ್ಣ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗುತ್ತಿರುವ ಬಗ್ಗೆ ಮುಖಂಡರು ಹರ್ಷ ವ್ಯಕ್ತಪಡಿಸಿದರು. ಕೆ.ಎಂ. ಸುರೇಶ್ ಮಾತನಾಡಿ, ಗುರುವಾರ ತಾಲೂಕಿನ ವಿವಿಧ ಭಾಗದ ಅನೇಕ ಮುಖಂಡರು ಬೆಂಗಳೂರಿಗೆ ತೆರಳಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಲಿದ್ದಾರೆ ಎಂದರು.
ಬೇರೆ ಬೇರೆ ಪಕ್ಷದ ಅನೇಕ ಕಾರ್ಯಕರ್ತರು ಜೆಡಿಎಸ್ ಪಕ್ಷವನ್ನು ಸೇರಲು ಮುಂದಾಗಿದ್ದು, ಸದ್ಯದಲ್ಲೇ ಬೃಹತ್ ಸಮಾವೇಶ ಮಾಡಲು ಚಿಂತಿಸಲಾಗಿದೆ ಎಂದರು. ಕೊಡಗಿನ ಎಲ್ಲಾ ಬಾಗದಲ್ಲಿ ಅನೇಕ ಹಿರಿಯ ಕಾರ್ಯಕರ್ತರು ಮುಖಂಡರು ಇದ್ದು ಮುಂದಿನ ದಿನಗಳಲ್ಲಿ ಪಕ್ಷವನ್ನು ಸಂಘಟಿಸಲು ಪ್ರಥಮ ಆದ್ಯತೆ ನೀಡಲಾಗುವದೆಂದು ಜಿಲ್ಲಾ ಜೆ ಡಿ ಎಸ್ ಉಪಾದ್ಯಕ್ಷ ಕೋಳೆರ ದಯಾ ಚಂಗಪ್ಪ ಹೇಳಿದರು . ಸಭೆಯಲ್ಲಿ ಮುಖಂಡರಾದ ಮನೆಯಪಂಡ ಬೆಳ್ಯಪ್ಪ, ಉಳುವಂಗಡ ದತ್ತಾ, ಸುಕು ಬೋಪಣ್ಣ, ಕರಣ್, ಶ್ರೀನಿವಾಸ್, ದೇವರಾಜ್, ನಾಸೀರ್, ಕರ್ತಮಾಡ ನರೇಂದ್ರ, ವಿನೇಶ್,ಚೋನೀರ ಸಜು, ಅಯ್ಯಪ್ಪ, ಬೋಪಣ್ಣ ಇದ್ದರು.