ಮಡಿಕೇರಿ, ಮೇ 23: ಜಿಲ್ಲೆಯಾದ್ಯಂತ ಗ್ರಾಹಕರು ತಮ್ಮಲ್ಲಿ ಉಪಯೋಗಿಸುತ್ತಿರುವ ಅಳತೆ, ತೂಕ ಮತ್ತು ತೂಕದ ಸಾಧನಗಳನ್ನು ಕಾನೂನು ಮಾಪನ ಶಾಸ್ತ್ರ ನಿರೀಕ್ಷಕರಿಂದ ಸತ್ಯಾಪನೆ ಮುದ್ರೆ ಮಾಡಿಸಿಕೊಳ್ಳುವದು ಸರಕಾರದ ಕಾನೂನಿನ ಪ್ರಕಾರ ಕಡ್ಡಾಯ ವಾಗಿರುತ್ತದೆ. ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಮತ್ತು ಅಳತೆ, ತೂಕದ ಸಾಧನಗಳನ್ನು ಉಪಯೋಗಿಸುವವರ ಅನುಕೂಲಕ್ಕಾಗಿ ಇಲಾಖೆಯಿಂದ ಜಿಲ್ಲೆಯಾದ್ಯಂತ ತಾತ್ಕಾಲಿಕ ಶಿಬಿರವನ್ನು ಏರ್ಪಡಿಸಲಾಗುತ್ತದೆ.
ತಾ. 22 ರಿಂದ 26ರ ವರೆಗೆ ಮಹಿಳಾ ಸಮಾಜ, ನಾಪೋಕ್ಲುವಿನಲ್ಲಿ ಶಿಬಿರ ನಡೆಯಲಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.