ಮಡಿಕೇರಿ, ಮೇ 23: ಕೊಡಗು ಫುಟ್ಬಾಲ್ ಅಕಾಡೆಮಿ ಮರಗೋಡು ವತಿಯಿಂದ ನಡೆಯುತ್ತಿರುವ ಗೌಡ ಫುಟ್ಬಾಲ್ ಪಂದ್ಯಾವಳಿಯಲ್ಲಿ ಬಡುವಂಡ್ರ, ಪೊನ್ನಚನ, ಕೋಚನ, ಯಾಲದಾಳು, ಬಿದ್ರುಪಣೆ, ಪಾಣತ್ತಲೆ (ಬಿ) ತಂಡಗಳು ಮುನ್ನಡೆ ಸಾಧಿಸಿವೆ.
ಇಂದು ನಡೆದ ಪಂದ್ಯಾಟದಲ್ಲಿ ಪೋರೆಕುಂಜಿಲನ ತಂಡ ದಾಯನ ತಂಡದ ವಿರುದ್ಧ 4-1 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ಪೋರೆಕುಂಜಿಲನ ಸಚಿನ್ 2, ಪ್ರಶಾಂತ್ 1, ವಿನಿ 1 ಗೋಲು ಬಾರಿಸಿದರು. ದಾಯನ ಪರ ಸುಗು 1 ಗೋಲು ಬಾರಿಸಿದರು. ಪೊನ್ನಚನ ತಂಡ ಗುಡ್ಡೆಮನೆ ವಿರುದ್ಧ ಗೆಲುವು ಸಾಧಿಸಿತು. ಪೊನ್ನಚನ ಕವನ್ 2, ಶ್ರೀನಿ 2, ನಿಶಾಂತ್ 1, ಮಹೇಶ್ 2 ಗೋಲು ಬಾರಿಸಿದರು.
ಪೋರೆಕುಂಜಿಲನ ತಂಡ ಮುಕ್ಕಾಟಿ (ಬಿ) ತಂಡದ ವಿರುದ್ಧ ಗೆಲುವು ಸಾಧಿಸಿತು. ಪೋರೆಕುಂಜಿಲನ ಪ್ರಶಾಂತ್ 1, ದೀಪು 1 ಗೋಲು ಬಾರಿಸಿದರು. ಮುಕ್ಕಾಟಿ ಪರ ಗಗನ್ 1 ಗೋಲು ಬಾರಿಸಿದರು. ಕೋಚನ ತಂಡ ಕೊಂಪುಳಿರ (ಬಿ) ತಂಡದ ವಿರುದ್ಧ 5-4 ಅಂತರದ ಗೆಲುವು ಸಾಧಿಸಿತು.
ಯಾಲದಾಳು ತಂಡ ಕೈಕೇರಿ ಮುಕ್ಕಾಟಿ ತಂಡದ ವಿರುದ್ಧ ಗೆಲುವು ಸಾಧಿಸಿತು. ಯಾಲದಾಳು ಪವನ್ 2 ಗೋಲು ಬಾರಿಸಿದರು. ಮುಕ್ಕಾಟಿ ಪರ ಪುನೀತ್ 1 ಗೋಲು ಬಾರಿಸಿದರು. ಪೊನ್ನಚನ ತಂಡ ತೇಲಬೈಲು ತಂಡದ ವಿರುದ್ಧ ಗೆಲುವು ಸಾಧಿಸಿತು. ಬಡುವಂಡ್ರ ತಂಡ ಬಿಳಿಯಂಡ್ರ ತಂಡದ ವಿರುದ್ಧ ಗೆಲುವು ಸಾಧಿಸಿತು. ಬಿದ್ರುಪಣೆ ತಂಡ ಮುಂಡೋಡಿ ತಂಡದ ವಿರುದ್ಧ ಗೆಲುವು ಸಾಧಿಸಿತು. ಮುಂದಿನ ಹಂತಕ್ಕೆ ಆರು ತಂಡಗಳು ಪ್ರವೇಶಿಸಿವೆ.