ಸುಂಟಿಕೊಪ್ಪ, ಮೇ 24: ಸುಂಟಿಕೊಪ್ಪ ಆಟೋಚಾಲಕ ಮತ್ತು ಮಾಲೀಕರ ಸಂಘದ ತುರ್ತು ಸಮಿತಿ ಸಭೆ ನಡೆಸಲಾಗಿದ್ದು, ದರ ಪರಿಷ್ಕರಣೆ ಮಾಡಲಾಗಿದೆ. ಪ್ರಯಾಣಿಕರು ಸಹಕರಿಸುವಂತೆ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಆಟೋ ಚಾಲಕ ಮತ್ತು ಮಾಲೀಕರ ಸಂಘದ ಕಛೇರಿಯಲ್ಲಿ ಸಂಘದ ಅಧ್ಯಕ್ಷ ಸಂತೋಷ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ವಾಹನದ ಬಿಡಿಭಾಗಗಳ ಬೆಲೆ ದುಬಾರಿಗೊಂಡಿದ್ದು, ಚಾಲಕರು, ಮಾಲೀಕರಿಗೆ ನಷ್ಟ ಉಂಟಾಗುತ್ತಿದೆ. ಹಾಗಾಗಿ ಆಟೋ ದರವನ್ನು ಪರಿಷ್ಕರಿಸಲಾಗಿದ್ದು ಪ್ರಯಾಣಿಕರು ಸಹಕರಿಸುವಂತೆ ಸಂಘದ ಅಧ್ಯಕ್ಷ ಸಂತೋಷ್, ಕಾರ್ಯದರ್ಶಿ ಬಿ.ಕೆ. ಪ್ರಶಾಂತ್ ಕೋರಿದ್ದಾರೆ.