ಮಡಿಕೇರಿ, ಮೇ 24: ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಡಿಕೇರಿ ಸಂಯುಕ್ತ ಆಶ್ರಯದಲ್ಲಿ ನೆರೆಹೊರೆ ಯುವಜನ ಸಂಸತ್ತು ಕಾರ್ಯಕ್ರಮದಡಿಯಲ್ಲಿ ಸ್ವಚ್ಛ ಭಾರತ ಆಂದೋಲನ ಕಾರ್ಯಕ್ರಮವನ್ನು ನಡೆಸಲಾಗಿದ್ದು, ಯುವಕ-ಯುವತಿ ಮಂಡಳಿಗಳ ಕಾರ್ಯ ಚಟುವಟಿಕೆಗಳಾನುಸಾರವಾಗಿ ಜಿಲ್ಲಾ ಯುವಜನ ಸಮನ್ವಯಾಧಿಕಾರಿ ತಲಾ ಮೂರು ತಾಲೂಕುಗಳಿಗೆ ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿಯನ್ನು ಈ ಕೆಳಗಿನ ಯುವಕ-ಯುವತಿ ಮಂಡಳಿಗಳಿಗೆ ನೀಡಿದೆ.

ಮಡಿಕೇರಿ ತಾಲೂಕು: - ಪ್ರಥಮ: ಸ್ನೇಹಿತರ ಯುವಕ ಸಂಘ, ಚಪ್ಪಂಡೆಕೆರೆ, ಗಾಳಿಬೀಡು. ದ್ವಿತೀಯ: ನೇತಾಜಿ ಯುವಕ ಮಂಡಲ, ತಾಲತ್ತಮನೆ. ಸೋಮವಾರಪೇಟೆ ತಾಲೂಕು: ಪ್ರಥಮ: ಡೋಮಿನೋಸ್ ಕ್ರೀಡಾ ಮತ್ತು ಕಲಾ ಯುವಜನ ಸಂಘ, ನೆಲ್ಲಿಹುದಿಕೇರಿ. ದ್ವಿತೀಯ: ಉದಯ ಯುವಕ ಸಂಘ, ಯಡೂರು.

ವೀರಾಜಪೇಟೆ ತಾಲೂಕು: ಪ್ರಥಮ: ಸುಬ್ರಮಣ್ಯ ಯುವತಿ ಮಂಡಳಿ, ಸುಣ್ಣದಬೀದಿ ವೀರಾಜಪೇಟೆ ಹಾಗೂ ದ್ವಿತೀಯ: ಶ್ರೀ ದೇವಿ ಮಹಿಳಾ ಮಂಡಳಿ, ಗೋಣಿಕೊಪ್ಪಲು ಪಡೆದುಕೊಂಡಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.