*ಗೋಣಿಕೊಪ್ಪಲು, ಮೇ 24 : ಪಾನಮತ್ತರಾಗಿ ಆಟೋದಲ್ಲಿ ತೆರಳುತ್ತಿದ್ದಾಗ ಆಟೋ ಚಾಲಕನ ನಿಯಂತ್ರಣ ತಪ್ಪಿದ ಕಾರಣ ಆಟೋದಲ್ಲಿದ್ದ 7 ಜನರಲ್ಲಿ ಓರ್ವ ಸಾವನಪ್ಪಿದ್ದಾರೆ. ಚಾಲಕ ಗಂಭೀರ ಸ್ಥಿತಿಯಲ್ಲಿದ್ದು, ಉಳಿದವರು ಸಣ್ಣಪುಟ್ಟ ಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ತಿತಿಮತಿ, ಬಾಳೆಲೆ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಬಾಳೆಲೆ ನಿವಾಸಿ ರಾಜು (53) ಸ್ಥಳದಲ್ಲೇ ಸಾವನಪ್ಪಿದ್ದು, ಚಾಲಕ ಹರೀಶ್ ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ (ಮೊದಲ ಪುಟದಿಂದ) ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಬುಧವಾರ ರಾತ್ರಿ ಮದ್ಯಪಾನ ಮಾಡಲು ಬಾಳೆಲೆ ನಿವಾಸಿಗಳಾದ 7 ಜನ ಸ್ನೇಹಿತರು ಪಿರಿಯಾಪಟ್ಟಣಕ್ಕೆ ಆಟೋದಲ್ಲಿ ತೆರಳಿದ್ದರೆನ್ನಲಾಗಿದೆ. ಪಾನಮತ್ತರಾಗಿ ಹಿಂದಿರುಗುತ್ತಿದ್ದಾಗ ತಿತಿಮತಿ, ಬಾಳೆಲೆ ರಸ್ತೆ ತಿರುವಿನಲ್ಲಿ 9.30ರ ಸಮಯ ಚಾಲಕ ನಿಯಂತ್ರಣ ತಪ್ಪಿ ಆಟೋ ಮಗುಚಿಕೊಂಡಿದೆ. ಈ ಸಂದರ್ಭ ಸ್ಥಳದಲ್ಲೇ ಓರ್ವ ಮೃತ ಪಟ್ಟಿದ್ದಾನೆ. ತಿತಿಮತಿ, ದೇವರಪುರ ಗ್ರಾಮದ ಹೆಬ್ಬಾಲೆ ಭದ್ರಕಾಳಿ ಅಯ್ಯಪ್ಪ ದೇವರ ಹಬ್ಬದ ಹಿನ್ನಲೆ ಜಿಲ್ಲಾಡಳಿತದ ಆದೇಶದಂತೆ ತಿತಿಮತಿ, ಗೋಣಿಕೊಪ್ಪಲು, ಪೆÇನ್ನಂಪೇಟೆ, ಪಾಲಿಬೆಟ್ಟ, ಬಾಳೆಲೆ, ಕಾನೂರು ಭಾಗಗಳಲ್ಲಿ ಮದÀ್ಯದ ಅಂಗಡಿಗಳನ್ನು ಮುಚ್ಚಲಾಗಿತ್ತು. ಈ ಕಾರಣ ಮದ್ಯಕ್ಕಾಗಿ ಪಿರಿಯಾಪಟ್ಟಣಕ್ಕೆ ತೆರಳಿ ಹಿಂದಿರುಗುವಾಗ ಈ ಘಟನೆ ನಡೆದಿದೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ವೃತ್ತ ನಿರೀಕ್ಷಕ ಹರಿಶ್ಚಂದ್ರ ಹಾಗೂ ಪೆÇನ್ನಂಪೇಟೆ ಠಾಣಾ ಉಪನಿರೀಕ್ಷಕ ಮಹೇಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಪೆÇನ್ನಂಪೇಟೆ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.