ಮಡಿಕೇರಿ, ಮೇ 22: ಇಲ್ಲಿನ ಕೋಟೆ ಶ್ರೀ ಮಹಾಗಣಪತಿ ಇನ್ನು ಮುಂದೆ ಚಿನ್ನದ ಕಿರೀಟದೊಂದಿಗೆ ರಾರಾಜಿಸಲಿದ್ದಾನೆ. ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿ ವತಿಯಿಂದ ಗಣಪತಿಗೆ ರೂ. 3.86 ಲಕ್ಷ ಮೌಲ್ಯದ ಕಿರೀಟ ಸಮರ್ಪಣೆ ಮಾಡುತ್ತಿದ್ದು, ಸಮರ್ಪಣಾ ಕಾರ್ಯ ತಾ. 24 ರಂದು ನಡೆಯಲಿದೆ.

ತಾ. 24 ರಂದು ಬೆಳಿಗ್ಗೆ 8 ರಿಂದ ವಿವಿಧ ಪೂಜಾದಿ ಕಾರ್ಯಗಳೊಂದಿಗೆ 108 ತೆಂಗಿನ ಕಾಯಿ ಗಣಪತಿ ಹೋಮ, ಮೂಡಪ್ಪ ಸೇವೆ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಸ್ವರ್ಣ ಕಿರೀಟ ಸಮರ್ಪಣಾ ಕಾರ್ಯ ನಡೆಯಲಿದೆ. 12.30ಕ್ಕೆ ಮಹಾಮಂಗಳಾರತಿ ನೆರವೇರಲಿದ್ದು, ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದಸರಾ ಮಂಟಪ ಸಮಿತಿಯವರು ತಿಳಿಸಿದ್ದಾರೆ.