ವೀರಾಜಪೇಟೆ, ಮೇ 22: ವೀರಾಜಪೇಟೆಯ ಶಾಂತಿನಗರದ ಶ್ರೀನಿವಾಸ್ ಎಂಬವರ ಪುತ್ರಿ ಶಾಲಿನಿ (19) ಎಂಬಾಕೆ ಇಂದು ಅಪರಾಹ್ನ 1.30 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಸಾಧಿಸಿ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವದಾಗಿ ನಗರ ಪೊಲೀಸರಿಗೆ ದೂರು ದೊರೆತ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ.ಶಾಲಿನಿ ಇಲ್ಲಿನ ಕಾವೇರಿ ಕಾಲೇಜಿನ ದ್ವಿತೀಯ ಬಿ.ಕಾಂ. ಪದವಿಯ ಎರಡನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರ ತನಿಖೆಯ ಪ್ರಕಾರ ಅನಾರೋಗ್ಯದಿಂದ ಬಳಲುತ್ತಿದ್ದು, ಆತ್ಮಹತ್ಯೆಗೆ ಕಾರಣ ವಿರಬಹುದೆಂದು ಶಂಕಿಸಲಾಗಿದೆ.