ಮಡಿಕೇರಿ, ಮೇ 21: ಕೊಡಗು ಫುಟ್ಬಾಲ್ ಅಕಾಡೆಮಿ ಮರಗೋಡು ವತಿಯಿಂದ ನಡೆಯುತ್ತಿರುವ ಗೌಡ ಫುಟ್ಬಾಲ್ ಪಂದ್ಯಾವಳಿಯಲ್ಲಿ ಐದು ತಂಡಗಳು ಮುನ್ನಡೆ ಸಾಧಿಸಿವೆ.ಇಂದು ನಡೆದ ಪಂದ್ಯದಲ್ಲಿ ಪರಿಚನ ತಂಡ ಕುದುಕುಳಿ ತಂಡದ ವಿರುದ್ಧ ಜಯ ಸಾಧಿಸಿತು. ಪರಿಚನ ವೇತನ್ 1 ಗೋಲು ಬಾರಿಸಿದರು. ಕಟ್ಟೆಮನೆ ತಂಡ ಪೇರಿಯನ ತಂಡವನ್ನು ಸೋಲಿಸಿತು. ಕಟ್ಟೆಮನೆ ತಂಡದ ಪರ ದಿನೇಶ್ 1, ದೀಪು 3, ಪ್ರೀತಮ್ 2, ರೋಷನ್ 1 ಗೋಲು ಬಾರಿಸಿದರು. ದೇವಜನ ತಂಡ ಹೊಸೋಕ್ಲು ತಂಡದ ವಿರುದ್ಧ ಗೆಲವು ಸಾಧಿಸಿತು. ದೇವಜನ ಪರ ಪುನೀತ್ ಕುಮಾರ್ 1, ಡಿ.ಡಿ. ಪುನೀತ್ 1 ಗೋಲು ಬಾರಿಸಿದರು. ಕರ್ಣಯ್ಯನ ತಂಡ ಪಾಣತ್ತಲೆ ‘ಎ’ ತಂಡವನ್ನು ಸೋಲಿಸಿತು. ಕರ್ಣಯ್ಯನ ಪರ ಈಶ್ವರ 2, ಪ್ರಜ್ವಲ್ 2, ಪ್ರತೀಕ್ 1 ಗೋಲು ಬಾರಿಸಿದರು. ಇಟ್ಟಣಿಕೆ ತಂಡ ಕೊಂಬಂಡ ತಂಡವನ್ನು ಸೋಲಿಸಿತು. ಇಟ್ಟಣಿಕೆ ಪರ ನೂತನ್ 4, ಕೊಂಬಂಡ ಪರ ಕಿರಣ್ 1 ಗೋಲು ಬಾರಿಸಿದರು.
ಬೊಳ್ಳೂರು ‘ಬಿ’ ತಂಡ ಪರಿಚನ ‘ಎ’ ತಂಡವನ್ನು ಸೋಲಿಸಿತು. ಪರಿಚನ ಪರ ವೇತನ್ 1, ಜಗ್ಗು 1, ಬಿನ್ನು 1 ಹಾಗೂ ಬೊಳ್ಳೂರು ಪರ ಮೋನಿಷ್ 2, ಕಮಲ್ 2 ಗೋಲು ಬಾರಿಸಿದರು. ಕಟ್ಟಮನೆ ತಂಡ ದೇವಜನ ತಂಡದ ವಿರುದ್ಧ ಗೆಲುವು ಸಾಧಿಸಿತು. ಕಟ್ಟೆಮನೆ ಪರ ಪ್ರೀತಮ್ 2, ದೇವಜನ ಪರ ಪುನೀತ್ 1 ಗೋಲು ಬಾರಿಸಿದರು. ಕರ್ಣಯ್ಯನ ತಂಡ ಕಾನಡ್ಕ ಗೆಲುವು ಸಾಧಿಸಿತು. ಕರ್ಣಯ್ಯನ ಭರತ್ 1 ಗೋಲು ಬಾರಿಸಿದರು. ಬೊಳ್ಳೂರು ‘ಬಿ’, ಹಿಟ್ಟಣಿಕೆ, ಕಟ್ಟೆಮನೆ, ಕರ್ಣಯ್ಯನ, ದಾಯನ ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಿದೆ.