ಮಡಿಕೇರಿ, ಮೇ 20: ದಕ್ಷಿಣ ಕೊಡಗಿನ ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಕಾಯಪಂಡ ಎಸ್. ಕಾವೇರಪ್ಪ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅಮ್ಮತ್ತೀರ ಆರ್. ಪರಮೇಶ್ವರ್, ಕಾರ್ಯದರ್ಶಿಯಾಗಿ ಅಣ್ಣೀರ ಪ್ರವೀಣ್, ಖಜಾಂಚಿಯಾಗಿ ಮೀದರಿರ ಗನ್ನು ಸೋಮಣ್ಣ ಅವರು ನೇಮಕಗೊಂಡಿದ್ದಾರೆ.
ನಿರ್ದೇಶಕರುಗಳಾಗಿ ಕಾಯಪಂಡ ವೀಟು ಮಾದಪ್ಪ, ಮೀದೇರಿರ ಕುಟ್ಟಪ್ಪ, ಮಲ್ಲೇಂಗಡ ರವೀಂದ್ರ, ಬಲ್ಯಮೀದೆರಿರ ರಾಜಾ ಸುಬ್ಬಯ್ಯ, ಕುಪ್ಪಡೀರ ಪುನೀತ್, ಚೋನೀರ ಅಭಿನ್ ಹಾಗೂ ಅಣ್ಣೀರ ಲೋಕೇಶ್, ಬಲ್ಯಮೀದೆರಿರ ಸಂಪತ್ ಅವರುಗಳನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಆಡಳಿತ ಮಂಡಳಿಗೆ ಆಯ್ಕೆ ನಡೆಯಿತು.