ಕುಶಾಲನಗರ, ಮೇ 14: ಪರಿಸರ ಸಂರಕ್ಷಣೆಗೆ ಬಗ್ಗೆ ಪ್ರತಿಯೊಬ್ಬರು ಕಾಳಜಿ ವಹಿಸಬೇಕಾಗಿದೆ ಎಂದು ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ಅಧಿಕಾರಿ ಹೆಚ್.ಎಸ್.ರಾಜಶೇಖರ್ ಹೇಳಿದರು.

ಕಾವೇರಿ ನದಿ ಸ್ವಚ್ಚತಾ ಆಂದೋಲನ ಆಶ್ರಯದಲ್ಲಿ ಚುನಾವಣಾ ಸ್ಥಿರ ಕಣ್ಗಾವಲು ತಂಡದ ಸದಸ್ಯರೊಂದಿಗೆ ಕುಶಾಲನಗರ ಕೊಪ್ಪ ಬಳಿಯ ಚೆಕ್ ಪೋಸ್ಟ್ ಬಳಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧುನೀಕರಣದಿಂದ ಅರಣ್ಯ ನಾಶವಾಗುತ್ತಿದೆ. ಪ್ರಕೃತಿಯ ಅಸಮತೋಲನದಿಂದ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಪ್ರತಿಯೊಬ್ಬರು ಕೂಡ ತಮ್ಮ ಮನೆ, ಜಮೀನುಗಳಲ್ಲಿ ಗಿಡ ನೆಟ್ಟು ಬೆಳೆಸುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು. ಕುಶಾಲನಗರ ಗಡಿಭಾಗದಲ್ಲಿ 48 ದಿನಗಳ ಕಾಲ ಸ್ಥಿರ ಕಣ್ಗಾವಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶ ಒದಗಿದ ನೆನಪಿಗಾಗಿ ಗಿಡ ನೆಡಲಾಯಿತು ಎಂದು ತಿಳಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿ ಎನ್.ಅರುಣ್ ಕುಮಾರ್

ಈ ಸಂದರ್ಭ ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಂಚಾಲಕರಾದ ಎಂ.ಎನ್.ಚಂದ್ರಮೋಹನ್ ಅವರಿಗೆ ಡಾ.ಅಂಬೇಡ್ಕರ್ ಅವರ ಸಂದೇಶ ಉಳ್ಳ ಕೃತಿಯೊಂದನ್ನು ಕೊಡುಗೆಯಾಗಿ ನೀಡಿದರು.

ನದಿ ಸ್ವಚ್ಚತಾ ಆಂದೋಲನ ಪ್ರಮುಖರಾದ ಡಿ.ಆರ್.ಸೋಮಶೇಖರ್, ಕೆ.ಆರ್.ಶಿವಾನಂದನ್, ಕೆ.ಎನ್.ದೇವರಾಜ್ ಅಬಕಾರಿ ಇಲಾಖಾ ಅಧಿಕಾರಿಗಳಾದ ತುಳಸಿರಾಜ್, ಶಿವಕುಮಾರ್, ಅರಣ್ಯ ಇಲಾಖಾ ಅಧಿಕಾರಿಗಳಾದ ರಾಯಪ್ಪ, ರಂಗಸ್ವಾಮಿ, ಸಾರಿಗೆ ಇಲಾಖಾ ಅಧಿಕಾರಿ ಪ್ರಭಾಕರ್, ಸಹಾಯಕ ಠಾಣಾಧಿಕಾರಿ ಗೀತಾ, ನವೀನ್, ಉದ್ಯಮಿಗಳಾದ ಯಾಕುಬ್, ಜೇಕಬ್, ಅರಣ್ಯ ಇಲಾಖೆ ಚೆಕ್ ಪೋಸ್ಟ್ ಸಹಾಯಕರು ಇದ್ದರು.