ನಾಪೆÇೀಕ್ಲು, ಮೇ. 13: ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಇಪ್ಪತ್ತೆಂಟನೇ ದಿನದ ಪಂದ್ಯಾಟದಲ್ಲಿ ಚೇಂದಂಡ, ಕೂತಂಡ, ಕುಲ್ಲೇಟಿರ, ಕೊಂಗೇಟಿರ, ಚೆಕ್ಕೆರ, ಚೇಂದಿರ, ಸೋಮೆಯಂಡ, ಚೆಪ್ಪುಡಿರ ತಂಡಗಳು ಪ್ರಿ ಕ್ವಾಟರ್ ಫೈನಲ್ಸ್ ಪ್ರವೇಶಿಸಿವೆ.

ಚೇಂದಂಡ ಮತ್ತು ಕುಪ್ಪಂಡ (ಕೈಕೇರಿ) ತಂಡಗಳ ನಡುವಿನ ಪಂದ್ಯದಲ್ಲಿ ಚೇಂದಂಡ ತಂಡವು ಕುಪ್ಪಂಡ ತಂಡವನ್ನು 4-0 ಗೋಲಿನಿಂದ ಮಣಿಸಿತು. ಚೇಂದಂಡ ತಂಡದ ಪರ ಮೋಕ್ಷಿತ್, ಬೋಪಣ್ಣ ತಲಾ ಎರಡೆರಡು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಕೂತಂಡ ಮತ್ತು ಪೆಮ್ಮಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೂತಂಡ ತಂಡವು ಪೆಮ್ಮಂಡ ತಂಡವನ್ನು 2-0 ಗೋಲಿನ ಅಂತರದಿಂದ ಮಣಿಸಿತು. ಕೂತಂಡ ತಂಡದ ಪರ ಸಂತೋಷ್ ಎರಡು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಮೇಕೇರಿರ ಮತ್ತು ಕುಲ್ಲೇಟಿರ ತಂಡಗಳ ನಡುವಿನ ಪಂದ್ಯದಲ್ಲಿ ಕುಲ್ಲೇಟಿರ ತಂಡವು ಮೇಕೇರಿರ ತಂಡವನ್ನು ಟೈ ಬ್ರೇಕರ್‍ನ 5-2 ಗೋಲಿನಿಂದ ಮಣಿಸಿತು. ಪಾಡೆಯಂಡ ಮತ್ತು ಕೊಂಗೇಟಿರ ತಂಡಗಳ ನಡುವಿನ ಪಂದ್ಯದಲ್ಲಿ ಕೊಂಗೇಟಿರ ತಂಡವು ಪಾಡೆಯಂಡ ತಂಡವನ್ನು 3-1 ಗೋಲಿನಿಂದ ಸೋಲಿಸಿತು. ಕೊಂಗೇಟಿರ ತಂಡದ ಪರ ನಿಲೇಶ್ ಮಾದಪ್ಪ, ಅಜಿಶ್ ಉತ್ತಯ್ಯ, ಸಾವನ್ ತಲಾ ಒಂದೊಂದು ಗೋಲು ದಾಖಲಿಸಿದರೆ, ಪಾಡೆಯಂಡ ತಂಡದ ಪರ ಸಂತೋಷ್ ಅಯ್ಯಪ್ಪ ಒಂದು ಗೋಲು ದಾಖಲಿಸಿದರು. ಚೆಕ್ಕೆರ ಮತ್ತು ಕೊಂಗಂಡ ತಂಡಗಳ ನಡುವಿನ ಸೆಣೆಸಾಟದಲ್ಲಿ ಚೆಕ್ಕೆರ ತಂಡವು ಕೊಂಗಂಡ ತಂಡವನ್ನು ಟೈ ಬ್ರೇಕರ್‍ನ 4-2 ಗೋಲಿನಿಂದ ಸೋಲಿಸಿತು. ಮಂಡೇಪಂಡ ಮತ್ತು ಸುಳ್ಳಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಮಂಡೇಪಂಡ ತಂಡವು ಸುಳ್ಳಿಮಾಡ ತಂಡವನ್ನು 5-0 ಗೋಲಿನ ಅಂತರದಿಂದ ಸೋಲಿಸಿತು. ಮಂಡೇಪಂಡ ತಂಡದ ಪರ ಬೋಪಣ್ಣ ಎರಡು, ಸಜನ್ ಅಚ್ಚಯ್ಯ, ಸಿದ್ದು ತಲಾ ಒಂದೊಂದು ಗೋಲು ದಾಖಲಿಸಿ ತಂಡವನ್ನು ಗೆಲ್ಲಿಸಿದರು. ಕರಿನೆರವಂಡ ಮತ್ತು ಚೇಂದಿರ ತಂಡಗಳ ನಡುವಿನ ಸೆಣೆಸಾಟದಲ್ಲಿ ಚೇಂದಿರ ತಂಡವು ಕರಿನೆರವಂಡ ತಂಡವನ್ನು ಟೈ ಬ್ರೇಕರ್‍ನ 6-4 ಗೋಲಿನ ಅಂತರದಿಂದ ಪರಾಭವಗೊಳಿಸಿತು. ಸೋಮೆಯಂಡ ಮತ್ತು ಬಾಳೆಯಡ ತಂಡಗಳ ನಡುವಿನ ಪಂದ್ಯದಲ್ಲಿ ಸೋಮೆಯಂಡ ತಂಡವು ಬಾಳೆಯಡ ತಂಡವನ್ನು 1-0 ಗೋಲಿನಿಂದ ಮಣಿಸಿತು. ಸೋಮೆಯಂಡ ತಂಡದ ಪರ ಅಪ್ಪಯ್ಯ ಒಂದು ಗೋಲು ದಾಖಲಿಸಿದರು. ಚೆಪ್ಪುಡಿರ ಮತ್ತು ಐನಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೆಪ್ಪುಡಿರ ತಂಡವು ಐನಂಡ ತಂಡವನ್ನು 2-1 ಗೋಲಿನಿಂದ ಸೋಲಿಸಿತು. ಚೆಪ್ಪುಡಿರ ತಂಡದ ಪರ ಪೂಣಚ್ಚ, ಸೋಮಣ್ಣ ತಲಾ ಒಂದೊಂದು ಗೋಲು ದಾಖಲಿಸಿ ದರೆ, ಐನಂಡ ತಂಡದ ಪರ ನಾಚಪ್ಪ ಒಂದು ಗೋಲು ದಾಖಲಿಸಿದರು.