ಮಡಿಕೇರಿ, ಮೇ 14: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಮಡ್ಲಂಡ ಕ್ರಿಕೆಟ್ ಹಬ್ಬದಲ್ಲಿ, ಇಂದು ನಡೆದ ಪಂದ್ಯಾಟದಲ್ಲಿ ಮಲ್ಲಾಜಿರ ತಂಡ ಚೌರೀರ ತಂಡವನ್ನು ಸೋಲಿಸಿತು. ಪುದಿಯತಂಡ ತಂಡ ನೆಲ್ಲೀರ ತಂಡವನ್ನು ಮಣಿಸಿತು. ಅಮ್ಮಚ್ಚಿಮಣಿಯಂಡ ತಂಡ ಮಾದೆಯಂಡ ತಂಡದ ವಿರುದ್ಧ ಗೆಲುವು ಸಾಧಿಸಿತು. ಕಾಡ್ಯಮಾಡ ವಿರುದ್ಧ ಚಂಗುಲಂಡ ಸೋಲು ಕಂಡಿತು. ನೆರವಂಡ ತಂಡ ಮುಲ್ಲಾಜಿರ ತಂಡವನ್ನು ಸೋಲಿಸಿತು. ಮುಕ್ಕಾಟಿರ ತಂಡ ಕೊಪ್ಪಿರ ತಂಡವನ್ನು ಮಣಿಸಿತು. ಅಚ್ಚಪಂಡ ತಂಡದೆದುರು ಅಟ್ರಂಗಡ ಸೋಲನುಭವಿಸಿತು. ಮುಕ್ಕಾಟಿರ (ಕುಂಬಳದಾಳು) ಮುಂಡಚಾಡಿರ ತಂಡದ ವಿರುದ್ಧ ಗೆಲುವು ಸಾಧಿಸಿತು. ಪುದಿಯತಂಡ ತಂಡ ಅಮ್ಮಚ್ಚಿಮಣಿಯಂಡ ತಂಡವನ್ನು ಸೋಲಿಸಿತು.