ನಾಪೆÇೀಕ್ಲು, ಮೇ. 3: ನಾಪೆÇೀಕ್ಲು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ನಮ್ಮೆಯ ಹತ್ತೊಂಬಂತ್ತನೇ ದಿನದ ಪಂದ್ಯಾಟ ದಲ್ಲಿ ಮಾಜಿ ಚಾಂಪಿಯನ್ಗಳಾದ ಕುಲ್ಲೇಟಿರ, ನೆಲ್ಲಮಕ್ಕಡ, ಅಂಜಪರ ವಂಡ ತಂಡಗಳು ಸೇರಿದಂತೆ ಇಟ್ಟೀರ, ಬಾದುಮಂಡ, ಮೇಕೇರಿರ, ಕೊಂಡಿರ, ಕಂಬೀರಂಡ, ಅರಮಣಮಾಡ, ಮುರುವಂಡ, ಚೋಯಮಾಡಂಡ, ಪೆಮ್ಮಂಡ, ಬೇಪುಡಿಯಂಡ, ಬಿದ್ದಾಟಂಡ, ಪಟ್ಟಡ, ಬಿದ್ದಂಡ ಮಂಡೀರ ತಂಡಗಳು ಜಯಗಳಿಸುವ ಮೂಲಕ ಮುಂದಿನ ಸುತ್ತು ಪ್ರವೇಶಿಸಿವೆ.ಕುಲ್ಲೇಟಿರ ಮತ್ತು ಅಮ್ಮಾಟಂಡ ತಂಡಗಳ ನಡುವಿನ ಪಂದ್ಯದಲ್ಲಿ ಆತೀಥೆಯ, ಮಾಜಿ ಚಾಂಪಿಯನ್ ಕುಲ್ಲೇಟಿರ ತಂಡವು ಅಮ್ಮಾಟಂಡ ತಂಡವನ್ನು 2-0 ಗೋಲಿನಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕುಲ್ಲೇಟಿರ ತಂಡದ ಪರ ನಾಚಪ್ಪ, ಯತೀನ್ ತಲಾ ಒಂದೊಂದು ಗೋಲು ದಾಖಲಿಸು ವದರ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಮಾಳೇಟಿರ ಮತ್ತು ಇಟ್ಟಿರ ತಂಡಗಳ ನಡುವಿನ ಪಂದ್ಯದಲ್ಲಿ ಮಾಳೇಟಿರ ತಂಡವನ್ನು ಇಟ್ಟಿರ ತಂಡವು 4-0 ಗೋಲಿನಿಂದ ಮಣಿಸಿತು. ಇಟ್ಟಿರ ತಂಡದ ಪರ ಅಚ್ಚಪ್ಪ, ರೋಶನ್, ಚಂಗಪ್ಪ, ಭವಿನ್ ತಲಾ ಒಂದೊಂದು ಗೋಲು ದಾಖಲಿಸಿದರು. ಬಾದುಮಂಡ ಮತ್ತು ಮಂಡೀರ (ಮಾದಪುರ) ತಂಡಗಳ ನಡುವಿನ ಪಂದ್ಯದಲ್ಲಿ ಬಾದುಮಂಡ ತಂಡವು ಮಂಡೀರ ತಂಡವನ್ನು 3-1 ಗೋಲಿನಿಂದ ಸೋಲಿಸಿತು. ಬಾದುಮಂಡ ತಂಡದ ಪರ ಶಯಾ ಕಾವೇರಮ್ಮ, ಭರತ್, ಬೋಪಣ್ಣ, ಸಚಿನ್ ಒಂದೊಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಮೇಕೇರಿರ ಮತ್ತು ಮಾರ್ಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಮೇಕೇರಿರ ತಂಡವು 5-0 ಗೋಲಿನಿಂದ ಮಾರ್ಚಂಡ ತಂಡವನ್ನು ಪರಾಭವಗೊಳಿಸಿತು. ಮೇಕೇರಿರ ತಂಡದ ಪರ ನೇಹಲ್, ಚೇತನ್, ನಿತಿನ್, ವಿಜು, ಚಿಣ್ಣಪ್ಪ, ಅಭಿನವ್ ಒಂದೊಂದು ಗೋಲು ದಾಖಲಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಕೊಂಡಿರ ಮತ್ತು ಶಿವಚಾಳಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕೊಂಡಿರ ತಂಡವು ಶಿವಚಾಳಿಯಂಡ ತಂಡವನ್ನು 3-1 ಗೋಲಿನ ಅಂತರದಿಂದ ಮಣಿಸಿತು. ಕೊಂಡಿರ ತಂಡದ ಪರ ಹೇಮಂತ್ ಮಾದಪ್ಪ ಎರಡು ಮತ್ತು ತಮ್ಮಯ್ಯ ಒಂದು ಗೋಲು ದಾಖಲಿಸಿದರೆ, ಶಿವಚಾಳಿಯಂಡ ತಂಡದ ಪರ ವಿಜು ಪೂಣಚ್ಚ ಒಂದು ಗೋಲು ದಾಖಲಿಸಿದರು. ಬೊಳಿಯಾಡಿರ ಮತ್ತು ಕಂಬೀರಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಳಿಯಾಡಿರ ತಂಡವನ್ನು ಕಂಬೀರಂಡ ತಂಡವು 5-0 ಗೋಲಿನ ಅಂತರದಿಂದ ಪರಾಭಾವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕಂಬೀರಂಡ ತಂಡದ ಪರ ಯೋಗೇಶ್ ಎರಡು, ಮಹಿಮ್ ಮೊಣ್ಣಪ್ಪ, ರಮೇಶ್, ರಾಯ್ ಜಗದೀಶ್ ತಲಾ ಒಂದೊಂದು ಗೋಲು ದಾಖಲಿಸಿದರು.
ಅರಮಣಮಾಡ ಮತ್ತು ಪಾಲೆಂಗಡ ತಂಡಗಳ ನಡುವಿನ ಪಂದ್ಯದಲ್ಲಿ ಅರಮಣಮಾಡ ತಂಡವು ಪಾಲೆಂಗಡ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ನೆಲ್ಲಮಕ್ಕಡ ಮತ್ತು ಕಲ್ಲೇಂಗಡ ತಂಡಗಳ ನಡುವಿನ ಪಂದ್ಯದಲ್ಲಿ ನೆಲ್ಲಮಕ್ಕಡ ತಂಡವು ಕಲ್ಲೇಂಗಡ ತಂಡವನ್ನು 4-0ಗೋಲಿನಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ನೆಲ್ಲಮಕ್ಕಡ ತಂಡದ ಪರ ಮೊಣ್ಣಪ್ಪ ಎರಡು ಮತ್ತು ಆಶಿಕ್ ಅಪ್ಪಣ್ಣ, ಸೋಮಯ್ಯ ತಲಾ ಒಂದೊಂದು ಗೋಲು ದಾಖಲಿಸಿ ದರು. ಅಂಜಪರವಂಡ ಮತ್ತು ಚೋಡುಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಅಂಜಪರವಂಡ ತಂಡವು 4-0 ಗೋಲಿನಿಂದ ಚೋಡುಮಾಡ ತಂಡವನ್ನು ಸೋಲಿಸಿತು. ಅಂಜಪರವಂಡ ತಂಡದ ಪರ ಹೇಮಂತ್ ದೇವಯ್ಯ, ರಂಜನ್ ಮುತ್ತಪ್ಪ, ದೀಪಕ್ ಸುಬ್ಬಯ್ಯ, ರೋಶನ್ ಮಾದಪ್ಪ ತಲಾ ಒಂದೊಂದು ಗೋಲು ದಾಖಲಿಸಿ ದರು. ಮುರುವಂಡ ಮತ್ತು ಕೀತಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಮುರುವಂಡ ತಂಡವು ಕೀತಿಯಂಡ ತಂಡವನ್ನು 5-0 ಗೋಲಿನಿಂದ ಪರಾಭವಗೊಳಿಸಿತು. ಮುರುವಂಡ ತಂಡದ ಪರ ಕಾರ್ಯಪ್ಪ ಎರಡು. ಮಿಥುನ್ ಅಣ್ಣಯ್ಯ ಎರಡು ಮತ್ತು ಉತ್ತಪ್ಪ ಒಂದು ಗೋಲು ದಾಖಲಿಸಿದರು. ನಾಗಂಡ ಮತ್ತು ಚೋಯಮಾಡಂಡ ತಂಡಗಳ ನಡುವಿನ ಪಂದ್ಯದಲ್ಲಿ ಚೋಯ ಮಾಡಂಡ ತಂಡವು ನಾಗಂಡ ತಂಡವನ್ನು 3-0 ಗೋಲಿನಿಂದ ಸೋಲಿಸಿತು.
ಚೋಯಮಾಡಂಡ ತಂಡದ ಪರ ಮಂದಣ್ಣ, ನಗಿಟ, ಚಂಗಪ್ಪ ತಲಾ ಒಂದೊಂದು ಗೋಲು ದಾಖಲಿಸಿ ದರು. ಅಲ್ಲಪಂಡ ಮತ್ತು ಬೇಪುಡಿ ಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಬೇಪುಡಿಯಂಡ ತಂಡವು 1-0 ಗೋಲಿನಿಂದ ಅಲ್ಲಪಂಡ ತಂಡವನ್ನು ಸೋಲಿಸಿತು. ಬೇಪುಡಿಯಂಡ ತಂಡದ ಪರ ಸುಬ್ಬಯ್ಯ ಒಂದು ಗೋಲು ದಾಖಲಿಸಿ ತಂಡದ ಗೆಲುವಿಗೆ ಕಾರಣರಾದರು. ಅಳಮೇಂಗಡ ಮತ್ತು ಬಿದ್ದಾಟಂಡ ತಂಡಗಳ ನಡುವಿನ ಪಂದ್ಯದಲ್ಲಿ ಬಿದ್ದಾಟಂಡ ತಂಡವು ಅಳಮೇಂಗಡ ತಂಡವನ್ನು 2-0 ಗೋಲಿನಿಂದ ಮಣಿಸಿತು. ಬಿದ್ದಾಟಂಡ ಚಲ್ಸಿ ಎರಡು ಗೋಲು ದಾಖಲಿಸಿ ತಂಡದ ಮುನ್ನಡೆಗೆ ಕಾರಣರಾದರು. ಪಟ್ಟಡ ಮತ್ತು ಪುದಿಯೊಕ್ಕಡ ತಂಡಗಳ ನಡುವಿನ ಪಂದ್ಯದಲ್ಲಿ ಪಟ್ಟಡ ತಂಡವು ಟೈಬ್ರೇಕರ್ನಲ್ಲಿ ಪುದಿಯೊಕ್ಕಡ ತಂಡವನ್ನು ಸೋಲಿಸಿತು. ಬಿದ್ದಂಡ ಮತ್ತು ಮುಳ್ಳಂಡ ತಂಡಗಳ ನಡುವಿನ ಪಂದ್ಯದಲ್ಲಿ ಬಿದ್ದಂಡ ತಂಡವು 1-0 ಗೋಲಿನಿಂದ ಮುಳ್ಳಂಡ ತಂಡವನ್ನು ಸೋಲಿಸಿತು. ಬಿದ್ದಂಡ ತಂಡದ ಪರ ಗ್ಯಾನ್ ಒಂದು ಗೋಲು ದಾಖಲಿಸಿದರು. ಮಂಡೀರ ಮತ್ತು ಚಂದೂರ ತಂಡಗಳ ನಡುವಿನ ಪಂದ್ಯದಲ್ಲಿ ಚಂದೂರ ತಂಡವು ಮಂಡೀರ ತಂಡವನ್ನು ಟೈಬ್ರೇಕರ್ನಲ್ಲಿ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.