ಸಿದ್ದಾಪುರ, ಮೇ 4: ಸಮೀಪದ ಚೆನ್ನಂಗಿ ಗುಡ್ಲೂರುವಿನ ಶ್ರೀ ಬಸವೇಶ್ವರ ದೇವಾಲಯದ ವಾರ್ಷಿಕೋತ್ಸವವು ತಾ. 8 ಹಾಗೂ 9 ರಂದು ಬಿಳಿಗಿರಿಯ ಶ್ರೀ ಉದಯ ಕುಮಾರ್ ತಂತ್ರಿರವರ ನೇತೃತ್ವದಲ್ಲಿ ನಡೆಯಲಿದೆ.ತಾ.8 ರಂದು ಸಂಜೆ ಪಂಚಗವ್ಯ, ಸ್ಥಳಶುದ್ಧಿ, ಪುಣ್ಯಹ, ಪಾರ್ಥನೆ, ಗಣಪತಿ ಪೂಜೆ, ವಾಸ್ತು ಪೂಜೆ, ಮಹಾಪೂಜೆ, ತೀರ್ಥಪ್ರಸಾದ ಅನ್ನಸಂತರ್ಪಣೆ ನಡೆಯಲಿದೆ.ತಾ.9 ರಂದು ಬೆಳಗ್ಗೆ 9 ಗಂಟೆಗೆ ಗಣಪತಿಹೋಮ, ನವಕ ಕಲಶ, ರುದ್ರಾಭಿಷೇಕ, ನಾಗತಂಬಿಲ, 11 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ ಅನ್ನಸಂತರ್ಪಣೆ ನಡೆಯಲಿದೆ.