ಕುಶಾಲನಗರ, ಮೇ 4: ಕುಶಾಲನಗರ ಚುನಾವಣಾ ಚೆಕ್ ಪೋಸ್ಟ್ ತಂಡದಿಂದ ಅಕ್ರಮ ಮದ್ಯ ಸಾಗಾಟ ಪತ್ತೆಯಾಗಿದ್ದು ರೂ. 19 ಸಾವಿರ ಮೌಲ್ಯದ ಮದ್ಯ ಸೇರಿದಂತೆ ವಾಹನ ಜಪ್ತಿ ಮಾಡಲಾಗಿದೆ. ಬೆಂಗಳೂರಿನಿಂದ ಮಡಿಕೇರಿಗೆ ಆಗಮಿಸುತ್ತಿದ್ದ ಟೆಂಪೋ ಟ್ರಾವೆಲರ್ (ಕೆಎ.02.ಎಇ.3199) ವಾಹನದಲ್ಲಿ 10 ಬಾಟಲಿ ಮದ್ಯವನ್ನು ಸಾಗಿಸುತ್ತಿದ್ದ ಸಂದರ್ಭ ಕುಶಾಲನಗರ ಕೊಪ್ಪ ಗೇಟ್ ಬಳಿ ಚುನಾವಣಾ ಮೆಜಿಸ್ಟ್ರೇಟ್ ರಘು ಮತ್ತು ಚುನಾವಣಾ ತಪಾಸಣಾ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ. ಪ್ರಕರಣವನ್ನು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದ್ದು ಮೊಕದ್ದಮೆ ದಾಖಲಾಗಿದೆ.ವಾಹನದಲ್ಲಿ ಬೆಂಗಳೂರಿನ 9 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ದಾಖಲೆಯಿಲ್ಲದೆ ಮದ್ಯದ ಬಾಟಲಿಗಳನ್ನು ಕೊಂಡೊಯ್ಯಲಾಗುತ್ತಿತ್ತು.