ನಾಪೆÇೀಕ್ಲು, ಮೇ. 4: ಏ. 15ರಿಂದ ನಾಪೆÇೀಕ್ಲು ಜನರಲ್ ಕೆ.ಎಸ್. ತಿಮ್ಮಯ್ಯ ಕೀಡಾಂಗಣದಲ್ಲಿ ನಡೆಯುತ್ತಿರುವ ಕುಲ್ಲೇಟಿರ ಕಪ್ ಹಾಕಿ ನಮ್ಮೆಯನ್ನು ವೀಕ್ಷಿಸಲು ತೆರಳಿದ ಹಾಕಿ ಪ್ರೇಮಿಗಳಿಗೆ ಮೇ. 4 ರಂದು ಅಚ್ಚರಿ ಮೂಡಿಸಿದ ಪ್ರಸಂಗ ಉಂಟಾಯಿತು. ಆ ದಿನ ಸಮೀಪದ ಬೇತು ಗ್ರಾಮ ಮಕ್ಕಿ ಶ್ರೀ ಶಾಸ್ತಾವು ದೇವರ ವಾರ್ಷಿಕ ಹಬ್ಬದ ಹಿನ್ನೆಲೆಯಲ್ಲಿ ಹಾಕಿ ಪಂದ್ಯಾಟಗಳನ್ನು ಸ್ಥಗಿತ ಗೊಳಿಸಲಾಗಿತ್ತು. ಬದಲಿಗೆ ಮಹಿಳಾ ದಿನಾಚರಣೆಯ ಅಂಗವಾಗಿ ಕುಲ್ಲೇಟಿರ ಹಾಕಿ ನಮ್ಮೆ ಮತ್ತು ಗೋಣಿಕೊಪ್ಪದ ಜನನಿ ಪೆÇಮ್ಮಕ್ಕಡ ಕೂಟದ ವತಿಯಿಂದ ನಡೆದ ಪೆÇಮ್ಮಕ್ಕಡ ನಮ್ಮೆಯಲ್ಲಿ ಕೊಡವ ಸಾಂಪ್ರದಾಯಿಕ ತಿಂಡಿಗಳಾದ ಕಜ್ಜಾಯ, ಚಿರೋಟಿ, ಚಕ್ಕುಲಿ, ಬಾಳೆ ಹಣ್ಣಿನ ಬಜ್ಜಿ, ನಿಂಬೆ ಉಪ್ಪಿನಕಾಯಿಯ ಪರಿಮಳ ನೆರೆದವರ ನಾಲಿಗೆಯಲ್ಲಿ ನೀರೂರಿಸುವಂತೆ ಮಾಡಿತು.ಅದರೊಂದಿಗೆ ಪುಷ್ಪಗಳ ಜೋಡಣೆ, ಕೊಡವ ಮಂಗಲ ‘ಅಂದು ಇಂದು’ ವಿಷಯದ ಕುರಿತು ಚರ್ಚಾ ಸ್ಪರ್ಧೆ, ಫ್ಯಾಷನ್ ಶೋ, ವಾಲಗ ನೃತ್ಯ, ಸಮೂಹ ನೃತ್ಯ ಹಾಗೂ ಬಲೂನ್ ಒಡೆಯುವ ಸ್ಪರ್ಧೆಗಳು ವೀಕ್ಷಕರಿಗೆ ಹೆಚ್ಚಿನ ಮನೋರಂಜನೆ ನೀಡಿತು. ವಿಶೇಷವಾಗಿ ಮಹಿಳೆಯರಿಗಾಗಿ ನಿಗದಿಪಡಿಸಿದ ಈ ದಿನದ ಕಾರ್ಯಕ್ರಮ ನೆರೆದಿದ್ದವರಿಗೆ ಆಕರ್ಷಣೆ ನೀಡಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಂತರ್ರಾಷ್ಟ್ರೀಯ ಹಾಕಿ ತೀರ್ಪುಗಾರ್ತಿ ಮುಂಡಂಡ ಅನುಪಮ ಮಂದಣ್ಣ, ಹೆಣ್ಣು ಮಕ್ಕಳು ಸಮಾಜದ ಮುಖ್ಯವಾಹಿನಿಯಲ್ಲಿ ದೈರ್ಯದಿಂದ ಮುನ್ನುಗ್ಗಬೇಕು

(ಮೊದಲ ಪುಟದಿಂದ) ಆದರೆ ಮಾತ್ರ ಯಶಸ್ಸುಗಳಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಜನನಿ ಪೆÇಮ್ಮಕ್ಕಡ ಕೂಟದ ಅಧ್ಯಕ್ಷೆ ಕುಲ್ಲೇಟಿರ ಪ್ರವಿ ಮೊಣ್ಣಪ್ಪ ಮಾತನಾಡಿ ಪೆÇಮ್ಮಕ್ಕಡ ನಮ್ಮೆಯಲ್ಲಿ ಎಲ್ಲರೂ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಕೊಡವ ಸಂಸ್ಕøತಿಯ ಉಳಿಕೆ ಮತ್ತು ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದರು.

ಭಾಗಮಂಡಲ ಶ್ರೀ ಭಂಗಂಢೇಶ್ವರ ದೇವಳ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿ ಕೊಡಗಿನಲ್ಲಿ ಹಾಕಿ ಹಬ್ಬವು ವಿಶೇಷತೆ ಹೊಂದಿದೆ. ಅದರಂತೆ ಮುಂದಿನ ದಿನಗಳಲ್ಲಿ ಕೊಡವ ಪೆÇಮ್ಮಕ್ಕಡ ಕೂಟವು ತಮ್ಮ ಕಾರ್ಯ ವೈಖರಿಯಿಂದ ಪ್ರಸಿದ್ಧಿ ಪಡೆಯಬೇಕು ಎಂದು ಹಾರೈಸಿದರು

ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರಾದ ಮೂವೇರ ಧರಣಿ ಗಣಪತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಉದ್ಯಮಿ ಅರೆಯಡ ಪವಿನ್ ಪೆÇನ್ನಣ್ಣ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲ್ಲೇಟಿರ ಹಾಕಿ ನಮ್ಮೆಯ ಅಧ್ಯಕ್ಷ ಶಂಭು ಮಂದಪ್ಪ ವಹಿಸಿದ್ದರು.

ಈ ಸಂದರ್ಭದಲ್ಲಿ ಅಂತರ ರಾಷ್ಟ್ರೀಯ ಹಾಕಿ ತೀರ್ಪುಗಾರ್ತಿ ಮುಂಡಂಡ ಅನುಪಮ ಮಂದಣ್ಣ, ಓಟಗಾರ್ತಿ ಕೇಚ್ಚೆಟ್ಟೆರ ರೇಷ್ಮಾ ದೇವಯ್ಯ ಅವರನ್ನು ಒಡಿಕತ್ತಿ ನೀಡಿ ಸನ್ಮಾನಿಸಲಾಯಿತು.

ಇತ್ತೀಚೆಗೆ ಅಸ್ಸಾಂ ರಾಜ್ಯದಲ್ಲಿ ನಡೆದ ರಾಷ್ಟ್ರೀಯ ಹಾಕಿ ಕ್ರೀಡಾಕೂಟದಲ್ಲಿ ಎರಡನೇ ಸ್ಥಾನ ಪಡೆದ ಹಾಕಿ ಕೂರ್ಗ್ ಸಂಸ್ಥೆಯ ಕಿರಿಯ ಭಾಲಕಿಯರ ತಂಡವನ್ನು ಗೌರವಿಸಲಾಯಿತು. ಪರ್ವತಾರೋಹಿ ತೆಕ್ಕಡ ಭವಾನಿ ಅವರ ಸಾಧನೆಯನ್ನು ಪರಿಚಯಿಸುವದರ ಮೂಲಕ ಅವರ ಮುಂದಿನ ಸಾಧನೆಗೆ ಧನ ಸಹಾಯ ಮಾಡುವಂತೆ ಕೋರಲಾಯಿತು.

ವೇದಿಕೆಯಲ್ಲಿ ಅಪ್ಪುಮಣಿಯಂಡ ಡೈಸಿ ಸೋಮಣ್ಣ, ಪಾಲಚಂಡ ಸುಮಿ ಮತ್ತಿತರರು ಇದ್ದರು.

ಮನೆಯಪಂಡ ದಿವ್ಯ ರಾಜೇಶ್ ಪ್ರಾರ್ಥನೆ. ಕುಲ್ಲೇಟಿರ ಹೇಮಾ ಸ್ವಾಗತ. ಚೋಕಿರ ಅನಿತಾ ಪ್ರವೀಣ್ ಮತ್ತು ಬಾಳೆಯಡ ದಿವ್ಯ ಮಂದಪ್ಪ ನಿರೂಪಿಸಿ, ಕುಲ್ಲೇಟಿರ ಯಶೋಧ ಚಿಮ್ಮಣ್ಣ ವಂದಿಸಿದರು.

-ಪಿ.ವಿ. ಪ್ರಭಾಕರ್