ಶ್ರೀಮಂಗಲ, ಮೇ 4: ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬೀರುಗ ಗ್ರಾಮ ಚೊಪ್ಪುಡಿಕೊಲ್ಲಿ ಶ್ರೀ ಪಾಲ್‍ಪಾರ್ ಚಾಮುಂಡಿ ವಿಷ್ಣುಮೂರ್ತಿ ದೇವಾಲಯ ಸಮಿತಿಯ ಜಂಟಿ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಹಾಗೂ ಶ್ರೀ ಪಾಲ್‍ಪಾರ್ ಚಾಮುಂಡಿ ವಿಷ್ಣುಮೂರ್ತಿ ವಾರ್ಷಿಕೋತ್ಸವದ ಅಂಗವಾಗಿ ತಾ. 5 ರಂದು (ಇಂದು) ಹಾಗೂ ತಾ. 7ರಂದು ಎರಡು ದಿನಗಳ ಸಾಹಿತ್ಯ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ತಾ. 5ರಂದು ಸಂಜೆ 5.30 ಗಂಟೆಗೆ ಕ.ಸಾ.ಪ. ಸಂಸ್ಥಾಪನಾ ದಿನಾಚರಣೆಯನ್ನು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಲೋಕೇಶ್ ಸಾಗರ್ ಉದ್ಘಾಟಿಸಲಿದ್ದಾರೆ. ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಪೂರ್ವ ಅಧ್ಯಕ್ಷ ಚೆಪ್ಪುಡೀರ ಪೊನ್ನಪ್ಪ ಶ್ರೀ ಪಾಲ್‍ಪಾರ್ ಚಾಮುಂಡಿ ವಿಷ್ಣುಮೂರ್ತಿ ದೇವಾಲಯದ ಧರ್ಮದರ್ಶಿ ಚೆಕ್ಕೇರ ರಾಜಪ್ಪ ಸುಬ್ಬಯ್ಯ, ಬಾದುಮಂಡ ವಿಷ್ಣು, ಚೆಪ್ಪುಡೀರ ಕೆ.ಮುದ್ದಪ್ಪ, ಅಜ್ಜಮಾಡ ಹ್ಯಾರಿ, ಕ.ಸಾ.ಪ. ಶ್ರೀಮಂಗಲ ಹೋಬಳಿ ಘಟಕ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಜೆ ಬೆಂಗಳೂರಿನ ಶಾಸ್ತ್ರೀಯ ನೃತ್ಯ ಕಲಾವಿದೆ ಕಿರಣ್ ಕಾಮತ್ ಅವರಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನ ಹಾಗೂ ವೀರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಿಂದ ಜನಪದ ನೃತ್ಯ ಪ್ರದರ್ಶನ ನಡೆಯಲಿದೆ.

ತಾ. 7ರಂದು ಸಂಜೆ 6.30 ಗಂಟೆಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕøತ ಕೀರ್ತನ ಸರಸ್ವತಿ ಹೆಚ್.ಎ. ವಸಂತಲಕ್ಷ್ಮಿ ಬೇಲೂರು ತಂಡದಿಂದ ಹರಿಕಥಾ ಕಾಲಕ್ಷೇಪ-ಗಿರಿಜಾ ಕಲ್ಯಾಣ ನಡೆಯಲಿದೆ.

ಚೆಕ್ಕೇರ ಕಾಳಯ್ಯ, ಅಜ್ಜಮಾಡ ಎಸ್. ಲವ ಕುಶಾಲಪ್ಪ, ಮಲ್ಲೇಂಗಡ ಕೀರ್ತಿ, ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಕಾರ್ಯದರ್ಶಿಗಳಾದ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ಹಾಗೂ ರೇಖಾ ಶ್ರೀಧರ್ ಭಾಗವಹಿಸಲಿದ್ದಾರೆ.