ನಾಪೆÇೀಕ್ಲು, ಮೇ 4: ಸಮೀಪದ ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ವಾರ್ಷಿಕ ವರ್ಷವೂ ಮೇ 2ರಿಂದ 4ರವರೆಗೆ ವಿಜೃಂಭಣೆಯಿಂದ ನೆರವೇರಿತು.ಮೇ 2ರಂದು ಸಂಜೆ ದೇವಾಲಯದಲ್ಲಿ ಕೊಟ್ಟಿ ಪಾಡುವದು. ತಾ. 3 ರಂದು ಬೆಳಿಗ್ಗೆ ಎತ್ತೇರಾಟ, ವಿವಿಧ ದೈವಿಕ ವಿಧಿವಿಧಾನಗಳೊಂದಿಗೆ ಮಹಾಪೂಜೆ. ರಾತ್ರಿ ದೀಪಾರಾಧನೆ (ಅಂದಿಬೊಳಕ್), ಮಹಾಪೂಜೆ, ತೋತ ಕೋಲ, ಅನಂತರ ಕರಿಬಾಳೆ, ಕುಟ್ಟಿಚಾತ ಮತ್ತು ನುಚ್ಚುಟ್ಟಿ ಮತ್ತಿತರ ಕೋಲಗಳು ಬೆಳಗ್ಗಿನವರೆಗೂ ನಡೆದವು. ತಾ. 4 ರಂದು ಪೂರ್ವಾಹ್ನ 10 ಗಂಟೆಗೆ ಮಕ್ಕಿ ಶಾಸ್ತಾವು ಸನ್ನಿಧಿಯಲ್ಲಿ ಐಕ್ಯನಾದ ಕಲ್ಯಾಟ ಅಜ್ಜಪ್ಪ ಭೂತದ ಕೋಲ (ಈ ಸಂದರ್ಭದಲ್ಲಿ ಕಲ್ಯಾಟ ಅಜ್ಜಪ್ಪನ ದರ್ಶನ ಬರುವ ಕೊಡಗಿನಾದ್ಯಂತ ಇರುವ ವ್ಯಕ್ತಿಗಳು ಇಲ್ಲಿ ಸೇರಿದ್ದರು) ಅನಂತರ ಅಪರಾಹ್ನ ವಿಷ್ಣುಮೂರ್ತಿ ಕೋಲವು ಕೆಂಡ (ಮೇಲೇರಿ)ದ ಮೇಲೆ ಬೀಳುವ ದೃಶ್ಯ ಅದ್ಭುತವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು. ನೆರೆದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು.