ವೀರಾಜಪೇಟೆ: ಜಾತ್ಯತೀತ ಜನತಾದಳದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮೇರಿಯಂಡ ಸಂಕೇತ್ ಪೂವಯ್ಯ ಕಕ್ಕಬೆಯ ಮುಖ್ಯ ರಸ್ತೆಯಲ್ಲಿ ರೋಡ್ ಷೋ ನಡೆಸಿ, ನಂತರ ಮನೆ ಮನೆ ಪ್ರಚಾರ ಮಾಡಿದರು.
ಈ ಸಂದರ್ಭ ಪಕ್ಷದ ವೀರಾಜಪೇಟೆ ಕ್ಷೇತ್ರದ ಅಧ್ಯಕ್ಷ ಎಸ್.ಹೆಚ್. ಮತೀನ್, ಕಕ್ಕಬೆಯ ಮುಖಂಡರುಗಳಾದ ಪಿ.ಯು. ಷಂಶುದ್ದೀನ್, ಸುಲೈಮಾನ್ ಚಿಮ್ಮ, ಅಚ್ಚು, ಮಕ್ಬೂಲ್, ಖಾಲೀದ್, ಮಜೀದ್, ಕೆ.ಎಂ. ಷಂಶುದ್ದೀನ್ ಮತ್ತಿತರರ ಕಾರ್ಯಕರ್ತರುಗಳು ಹಾಜರಿದ್ದರು.
ಮನೆ ಮನೆ ಪ್ರಚಾರದ ನಂತರ ಪಕ್ಷದ ಕಾರ್ಯಕರ್ತರೊಂದಿಗೆ ಕುಂಜಿಲ ಗ್ರಾಮದ ಪೈನರಿ ಮಸೀದಿಗೆ ತೆರಳಿ ರಸ್ತೆ ದುಸ್ಥಿತಿಯ ಕುರಿತು ಪರಿಶೀಲಿಸಿದರು.