ಕುಶಾಲನಗರ, ಮೇ 4: ಕೂಡಿಗೆ ವ್ಯಾಪ್ತಿಯಲ್ಲಿ ಕಾವೇರಿ ನೀರಿನ ಬಣ್ಣ ಬದಲಾಗಿ ಹರಿಯುತ್ತಿದ್ದ ಪ್ರಕರಣದ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇತ್ತೀಚೆಗೆ ನದಿ ನೀರು ಕೆಂಪು ವರ್ಣಕ್ಕೆ ಬದಲಾಗುವದರೊಂದಿಗೆ ಕಲುಷಿತಗೊಂಡಿರುವ ನೀರಿನ ಬಗ್ಗೆ ವರದಿಯಾದ ಹಿನ್ನೆಲೆ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಜಿ.ಆರ್. ಗಣೇಶನ್ ಮತ್ತು ಸಿಬ್ಬಂದಿಗಳು ಕಣಿವೆ ವ್ಯಾಪ್ತಿಗೆ ಭೇಟಿ ನೀಡಿದ್ದರು. ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಮಳೆ ಹಿನ್ನೆಲೆ ಈ ರೀತಿ ಆಗಿರುವ ಸಾಧ್ಯತೆಯಿದೆ ಎಂದು ಗಣೇಶನ್ ಮಾಹಿತಿ ನೀಡಿದ್ದಾರೆ.