ಸೋಮವಾರಪೇಟೆ,ಏ.12: ಕೊಡಗು ಜಿಲ್ಲಾ ಆದಿ ದ್ರಾವಿಡ ಸಮಾಜದ ಕುಂಬೂರು-ಲಕ್ಕೇರಿ ಪೈಸಾರಿ ಘಟಕದ ಅಧ್ಯಕ್ಷರಾಗಿ ಹೆಚ್.ಎ. ಸಂದೇಶ್, ಉಪಾಧ್ಯಕ್ಷರಾಗಿ ಎಸ್. ಕುಮಾರ್, ಕಾರ್ಯದರ್ಶಿಯಾಗಿ ಹೆಚ್.ಎನ್. ರಮೇಶ್, ಖಜಾಂಚಿಯಾಗಿ ಜಿ.ಕೆ. ಸತೀಶ್ ಸೇರಿದಂತೆ 10 ಮಂದಿಯನ್ನು ಕಾರ್ಯಕಾರಿ ಮಂಡಳಿ ಸದಸ್ಯರನ್ನಾಗಿ ನೇಮಕಗೊಳಿಸಲಾಯಿತು.

ಕುಂಬೂರಿನಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಗಿದ್ದು, ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಜಿ. ಕುಶಾಲಪ್ಪ, ತಾಲೂಕು ಉಪಾಧ್ಯಕ್ಷ ಜೆರ್ಮಿ, ಜಿಲ್ಲಾ ಕಾರ್ಯದರ್ಶಿ ಕೆ.ಎಸ್. ಸಂದೀಪ್ ಅವರುಗಳು ಭಾಗವಹಿಸಿದ್ದರು.