ಸಿದ್ದಾಪುರ, ಏ. 12: ಪ್ರತಿಷ್ಠಿತ ಕೊಡಗು ಚಾಂಪಿಯನ್ಸ್ ಲೀಗ್ ಪಂದ್ಯಾವಳಿಯ ಫೈನಲ್‍ನಲ್ಲಿ ವೀರಾಜಪೇಟೆಯ ರಾಯಲ್ಸ್ ತಂಡವನ್ನು ಮಣಿಸಿ ಸಿದ್ದಾಪುರದ ಫಯರ್ ಟೈಗರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಸಿದ್ದಾಪುರ ಪ್ರೌಢಶಾಲಾ ಮೈದಾನದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆದ ಕೆ.ಸಿ.ಎಲ್ ಕ್ರೀಡಾಕೂಟದಲ್ಲಿ ಫಯರ್ ಟೈಗರ್ಸ್ ಹಾಗೂ ರಾಯಲ್ಸ್ ವೀರಾಜಪೇಟೆ ತಂಡ ಫೈನಲ್‍ನಲ್ಲಿ ಗೆಲುವಿಗಾಗಿ ಹೋರಾಟ ನಡೆಸಿತು. ಮೊದಲಿಗೆ ಬ್ಯಾಟಿಂಗ್ ಮಾಡಿದ ಫಯರ್ ಟೈಗರ್ಸ್ ತಂಡ ನಿಗದಿತ 8 ಓವರ್‍ಗಳಲ್ಲಿ 43 ಬಾರಿಸಿತು. ಗೆಲುವಿನ ಗುರಿಯೊಂದಿಗೆ ಕಣಕ್ಕಿಳಿದ ರಾಯಲ್ಸ್ ವೀರಾಜಪೇಟೆ ತಂಡ 9 ವಿಕೆಟ್‍ಗಳ ನಷ್ಟಕ್ಕೆ 37 ರನ್‍ಗಳಿಸಲಷ್ಟೆ ಶಕ್ತವಾಯಿತು. ಇದರೊಂದಿಗೆ ಫಯರ್ ಟೈಗರ್ಸ್ ತಂಡ 2018 ರ ಕೆ.ಸಿ.ಎಲ್ ನ ಚಾಂಪಿಯನ್ ಆಗಿ ಹೊರಹೊಮ್ಮಿತು. ಫಯರ್ ಟೈಗರ್ ಪರ ಅಶ್ವತ್ ಹೆಚ್ಚು ರನ್ ಗಳಿಸಿದರು. ಉತ್ತಮ ಧಾಳಿ ನಡೆಸಿದ ಶಾನಿಫ್ ಗೆಲುವಿನ ರುವಾರಿಯಾದರು.
ಇದಕ್ಕೂ ಮೊದಲು ನಡೆದ ಮೊದಲನೆ ಕ್ವಾಲಿಫೈಯರ್ ಪಂದ್ಯದಲ್ಲಿ ಫಯರ್ ಟೈಗರ್ಸ್ ಹಾಗೂ ರಾಯಲ್ಸ್ ವೀರಾಜಪೇಟೆ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಫಯರ್ ಟೈಗರ್ಸ್ ಗೆಲುವು ಸಾಧಿಸಿ ಫೈನಲ್‍ಗೆ ಲಗ್ಗೆ ಇಟ್ಟಿತು. ಎಲಿಮಿನೇಟರ್ ಪಂದ್ಯದಲ್ಲಿ ಕ್ರಿಯೇಟಿವ್ ಚಾಣಕ್ಯ ಮಡಿಕೇರಿ ಹಾಗೂ ಎಫ್.ಜಿ.ಸಿ ಹುಂಡಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎಫ್.ಜಿ.ಸಿ ತಂಡ ಗೆಲುವು ಸಾಧಿಸಿತು. ಬಳಿಕ ಕ್ವಾಲಿಫಯರ್ ಪಂದ್ಯದಲ್ಲಿ ತೋತ ರಾಯಲ್ಸ್ ಹಾಗೂ ಎಫ್.ಜಿ.ಸಿ ನಡುವೆ ನಡೆದ ಪಂದ್ಯದಲ್ಲಿ ರಾಯಲ್ಸ್ ಗೆದ್ದು ಫೈನಲ್‍ಗೆ ಲಗ್ಗೆ ಇಟ್ಟಿತ್ತು.
ಚಾಂಪಿಯನ್ ತಂಡಕ್ಕೆ 1,15,151 ನಗದು ಹಾಗೂ ಟ್ರೋಫಿ ನೀಡ ಲಾಯಿತು. ದ್ವಿತೀಯ ಬಹುಮಾನ ವಾಗಿ 56,565 ರೂ ನಗದು ಹಾಗೂ ಟ್ರೋಫಿ ನೀಡಲಾಯಿತು. ಚಾಂಪಿಯನ್ ತಂಡ ರೂ 15,151 ರೂ ಹಣವನ್ನು ಇಂಜಲಗರೆ ಹಾಗೂ ವೀರಾಜಪೇಟೆಯ ಅನಾರೋಗ್ಯ ಪೀಡಿತ ಮಕ್ಕಳಿಗೆ ನೀಡಿತು. ರಾಯಲ್ಸ್ ತಂಡವೂ ಕೂಡ ದೊರೆತ 56,565 ಹಣವನ್ನು ಅನಾರೋಗ್ಯ ಪೀಡಿತ ಮಗುವಿಗೆ ನೀಡಿ ಮಾನವೀಯತೆ ಮೆರೆಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಗ್ರಾಮೀಣ ಕ್ರೀಡಾಪಟುಗಳಿಗೆ ಕೆ.ಸಿ.ಎಲ್ ಅದ್ಭುತ ವೇದಿಕೆಯಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹಮ್ಮಿಕೊಳ್ಳುವ ರೀತಿಯ ಕ್ರೀಡಾಕೂಟವನ್ನು ಹಮ್ಮಿಕೊಂಡಿರು ವದು ಹೆಮ್ಮೆಯ ಸಂಗತಿ. ಸರಕಾರ ಹಾಗೂ ಕ್ರಿಕೆಟ್ ಸಂಸ್ಥೆಗಳು ಮಾಡಬೇಕಾದ ಕಾರ್ಯವನ್ನು ಕೆ.ಸಿ.ಎಲ್ ಸಮಿತಿ ಮಾಡುತ್ತಿದೆ. ವಿದೇಶದಲ್ಲಿ ಕೆಲಸದಲ್ಲಿರುವ ಪ್ರತಿಭೆಗಳು ಕೂಡ ಕೆ.ಸಿ.ಎಲ್‍ಗಾಗಿ ರಜೆ ಮಾಡಿಕೊಂಡು ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವದು ಉತ್ತಮ ಬೆಳವಣಿಗೆ. ಸರಕಾರ ಈ ಮಾದರಿಯ ಕ್ರೀಡಾಕೂಟಗಳಿಗೆ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು. ಸಮಾಜ ಸೇವೆಯಲ್ಲಿ ಕೂಡ ಜವಾಬ್ದಾರಿ ಯಿಂದ ನಿಸ್ವಾರ್ಥ ಸೇವೆ ಮಾಡುತ್ತಿ ರುವ ಸಿಟಿ ಬಾಯ್ಸ್ ಯುವಕ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಸಂಪಾಜೆ ಮಾತನಾಡಿ, ಪುಟ್ಟ ಗ್ರಾಮದಲ್ಲಿ ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳುತ್ತಿರುವದು ಜಿಲ್ಲೆಗೆ ಹೆಮ್ಮೆ ತಂದಿದೆ. ಸೌಹಾರ್ದತೆ ಮೂಡಿಸಲು ಕ್ರೀಡಾಕೂಟಗಳು ಅನಿವಾರ್ಯವಾಗಿದ್ದು, ಕೆ.ಸಿ.ಎಲ್ ಆ ಕೆಲಸವನ್ನು ಮಾಡುತ್ತಿದೆ ಎಂದರು. ಪಂದ್ಯಾವಳಿಯ ಉತ್ತಮ ಹೊಡೆತಗಾರನಾಗಿ ರಾಯಲ್ಸ್ ತಂಡದ ಅಲೀಮ್, ಉತ್ತಮ ಎಸೆತಗಾರನಾಗಿ ರಾಯಲ್ಸ್‍ನ ಮುಸ್ತಫುುತ್ತಮ ಗೂಟರಕ್ಷಕನಾಗಿ ಎಫ್.ಜಿ.ಸಿ ತಂಡದ ರಿಯಾಜ್, ಯುವ ಆಟಗಾರನಾಗಿ ರಹೀಂ, ಉತ್ತಮ ತಂಡವಾಗಿ ಎಫ್.ಜಿ.ಸಿ ಹುಂಡಿ, ಅತಿ ಹೆಚ್ಚು ಸಿಕ್ಸ್ ಬಾರಿಸಿದ ಡಾಟ್ ಡಾಮಿನೇಟರ್ ತಂಡದ ಎ.ಎಸ್ ಮುಸ್ತಫ, ಉತ್ತಮ ಕ್ಯಾಚ್ ಡಾಟ್‍ನ ಷಂಶು, ಅಂತಿಮ ಪಂದ್ಯದ ಪಂದ್ಯ ಪುರುಷೋತ್ತಮ ಶಾನಿದ್ ಆಯ್ಕೆಯಾದರು.
ವೇದಿಕೆಯಲ್ಲಿ ಕೆ.ಸಿ.ಎಲ್ ಅಧ್ಯಕ್ಷ ಸುರೇಶ್ ಬಿಳಿಗೇರಿ, ಸಿಟಿ ಬಾಯ್ಸ್ ಅಧ್ಯಕ್ಷ ಹ್ಯಾರಿಸ್, ಡೈಮಂಡ್ ಟೂರಿಸ್ಟ್ ಹೋಂ ಮಾಲಿಕ ಜಂಶೀರ್, ಗುಡ್ ಲಕ್ ಎಲೆಕ್ಟ್ರಾನಿಕ್ಸ್ ಮಾಲಿಕ ರಿಯಾಜ್, ದಾನಿಗಳಾದ ವಿಜೇಶ್, ವಿನ್ಸಿ, ಸಲಾಂ, ವಿ.ಕೆ ಬಷೀರ್, ವಾಸಿ, ಮಲಬಾರ್ ಫರ್ನಿಚರ್ ಮಾಲಿಕ ಮಜೀದ್, ಸಿತಾರ ಮಾಲಿಕ ರಯಿಸ್, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಎನ್ ವಾಸು, ಕ್ರಿಯೇಟಿವ್ ಇಮೇಜ್‍ನ ಖಲೀಲ್, ಶಾ ಮ್ಯೂಸಿಕ್‍ನ ಶಾಫಿ, ಫ್ರೆಶ್‍ಗೋ ಮಾಲಿಕ ಮುನೀರ್, ಮಾಜಿ ತಾ.ಪಂ ಸದಸ್ಯ ಎಂ.ಬಿಜೋಯ್, ರಿಯಾ ಸೆರಾಮಿಕ್ಸ್ ಮಾಲಿಕ ನಿಶಾದ್, ಕಾಫಿಯಾ ರೆಸ್ಟೋರೆಂಟ್ ಮಾಲಿಕ ಶಿಯಾಬ್, ಜಿಮ್ಮಿ ಸಿಕ್ವೇರಾ, ಗ್ರಾ.ಪಂ ಸದಸ್ಯ ಶೌಕತ್ ಆಲಿ, ನೆಲ್ಯಹುದಿಕೇರಿ ಗ್ರಾ.ಪಂ ಸದಸ್ಯ ಅಫ್ಸಲ್, ಕಿಶೋರ್ ಕುಮಾರ್, ಕಲಾವಿದ ಭಾವ ಮಾಲ್ದಾರೆ ಇನ್ನಿತರರು ಇದ್ದರು.
ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಡಾ|| ರಾಘವೇಂದ್ರ ಅವರನ್ನು ಕೆ.ಸಿ.ಎಲ್ ವತಿಯಿಂದ ಸನ್ಮಾನಿಸಲಾಯಿತು. ಸಿದ್ದಾಪುರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಮಂದಿ ಕ್ರೀಡಾಪ್ರೇಮಿಗಳು ಕ್ರೀಡಾಕೂಟದ ವೀಕ್ಷಣೆಗೆ ಆಗಮಿಸಿದ್ದರು.