ಮಡಿಕೇರಿ, ಏ. 12: ಮೈಸೂರಿನ ದಿಶಾ ಫೌಂಡೇಶನ್, ಮಡಿಕೇರಿಯ ಮೌರ್ಯ ಎಜುಕೇಶನ್ ಟ್ರಸ್ಟ್ ವತಿಯಿಂದ ನಗರದಲ್ಲಿಂದು ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರಜಾಪ್ರಭುತ್ವ

ಸಬಲೀಕರಣ ಅಭಿಯಾನ ಜಾಗೃತಿ ಜಾಥಾ ನಡೆಸಲಾಯಿತು. ಕಾವೇರಿ ಕಲಾ ಕ್ಷೇತ್ರದಿಂದ ಆರಂಭಗೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಪುಟಾಣಿನಗರದಲ್ಲಿ ಜಾಥಾ ಅಂತ್ಯಗೊಂಡಿತು.