ಮಡಿಕೇರಿ, ಏ.11 : ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಇದೇ ಪ್ರಥಮ ಬಾರಿಗೆ ‘ಅರೆಭಾಷೆ ಯಕ್ಷಗಾನ ತರಬೇತಿ ಶಿಬಿರ’ವನ್ನು ಆಯೋಜಿಸಲಾಗಿದೆ. ತಾ. 17ರ ಪೂರ್ವಾಹ್ನ 10 ಗಂಟೆಗೆ ಶಿಬಿರದ ಉದ್ಘಾಟನೆ ನಗರದ ಕೊಡಗು ಗೌಡ ವಿದ್ಯಾಸಂಘದ ಆವರಣದಲ್ಲಿ ನಡೆಯಲಿದ್ದು, ಮೇ 26 ರಂದು ಸುಳ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ಕಳೆದ ಬಾರಿ ಅರೆಭಾಷೆ ನಾಟಕ ತರಬೇತಿ ನೀಡಲಾಗಿದ್ದು, ಈ ಬಾರಿ ಪ್ರೌಢಶಾಲೆ ಮತ್ತು ಕಾಲೇಜು ವಿಭಾಗದ ಮಕ್ಕಳಿಗಾಗಿ ಯಕ್ಷಗಾನ ತರಬೇತಿ ನೀಡುವ ಮೂಲಕ ಕಲೆಯನ್ನು ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.ಶಿಬಿರವು ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲಿಗೆ 15 ದಿನಗಳ ಶಿಬಿರ ಮಡಿಕೇರಿಯಲ್ಲಿ ಜರುಗಲಿದೆ. ಬಳಿಕ ಸುಳ್ಯದಲ್ಲಿ ದ್ವಿತೀಯ ಹಂತದ ತರಬೇತಿ ಶಿಬಿರ ಆಯೋಜಿಸ ಲಾಗುತ್ತದೆ. ಎರಡೂ ಶಿಬಿರಗಳ ಸಮಾರೋಪವನ್ನು ಏಕಕಾಲದಲ್ಲಿ ಆಯೋಜಿಸುವದ ರೊಂದಿಗೆ
ತರಬೇತಿ ಪಡೆದ ಕಲಾವಿದ ರಿಂದ ಯಕ್ಷಗಾನ ಪ್ರದರ್ಶನವೂ ನಡೆಯಲಿದೆ (ಮೊದಲ ಪುಟದಿಂದ) ತ್ರೈಮಾಸಿಕವನ್ನು ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಕೊಲ್ಯದ ಗಿರೀಶ್ ಅವರು ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ಗೌಡ ಫೆಡರೇಷನ್‍ನ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಮನೋಹರ್ ಮಾದಪ್ಪ, ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕುಂಜಿಲನ ಮುತ್ತಮ್ಮ ಅವರುಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭ ಕಲಾಮಾಯೆ ಮುನ್ನೂರೊಕ್ಲು ಇವರಿಂದ ‘ಒಂದಾನೊಂದು ಕಾಲಲಿ’ ಅರೆಭಾಷೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಉಮರಬ್ಬ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಸದಸ್ಯರಾದ ಕಾನೆಹಿತ್ಲು ಮೊಣ್ಣಪ್ಪ, ಕುಂಬುಗೌಡನ ಪ್ರಸನ್ನ, ಬಾರಿಯಂಡ ಜೋಯಪ್ಪ, ಕಡ್ಲೇರ ತುಳಸಿ ಮೋಹನ್ ಹಾಜರಿದ್ದರು.
ನೋಂದಣಿ ಕಾರ್ಯ : ಯಕ್ಷಗಾನ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ವಿದ್ಯಾರ್ಥಿಗಳ ನೋಂದಣಿ ಕಾರ್ಯ ಬೆಳಿಗ್ಗೆ ಅಕಾಡೆಮಿ ಕಚೇರಿಯಲ್ಲಿ ನಡೆಯಿತು. ವಿದ್ಯಾರ್ಥಿಗಳ ಹೆಸರು ನೋಂದಾವಣೆಯೊಂದಿಗೆ ಪೆನ್ನು, ಪುಸ್ತಕಗಳನ್ನು ನೀಡಲಾಯಿತು. ಶಿಬಿರ ಹಾಗೂ ಯಕ್ಷಗಾನ ಕಲೆಯ ಬಗ್ಗೆ ರಿಜಿಸ್ಟಾರ್ ಉಮರಬ್ಬ ಹಾಗೂ ಸಂಚಾಲಕ ಮೊಣ್ಣಪ್ಪ ಮಕ್ಕಳಿಗೆ ಮಾಹಿತಿ ನೀಡಿದರು. ಪೋಷಕರು ಹಾಗೂ ಕಚೇರಿ ಸಿಬ್ಬಂದಿಗಳು ಹಾಜರಿದ್ದರು.