ಮಡಿಕೇರಿ, ಏ. 11: ಮಳೆಗಾಲ ಇನ್ನೂ ಪ್ರಾರಂಭವಾಗಿಲ್ಲ. ಆದರೆ ನಗರದ ಕುಮಾರನ್ ವಿಲಾಸ್ ಹೊಟೇಲ್ ಜಂಕ್ಷನ್ನಲ್ಲಿನ ಪ್ರಸ್ತುತದ ಚಿತ್ರಣ ಮಳೆಗಾಲವನ್ನೂ ನಾಚಿಸುವಂತಿದೆ. ಯುಜಿಡಿ ಕಾಮಗಾರಿಯ ಹೆಸರಿನಲ್ಲಿ ರಸ್ತೆಯನ್ನು ಸಂಪೂರ್ಣವಾಗಿ ಕೆಸರು ಗುಂಡಿಯನ್ನಾಗಿ ಪರಿವರ್ತಿಸಲಾಗಿದೆ. ವಾಹನ ಚಾಲಕರು ಪರದಾಡುತ್ತಾ, ವಾಹನ ಚಾಲನೆ ಮಾಡಬೇಕಾದ ದುಸ್ಥಿತಿ ಎದುರಾಗಿದೆ. ಪಾದಚಾರಿಗಳು ‘ಎಲ್ಲಿ ಜಾರಿ ಬೀಳುತ್ತೇವೋ?’ ಎಂದು ಹೆದರುತ್ತಾ ಹೆಜ್ಜೆಯಿಡಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ. ಇಂದು ಕೆಲಕಾಲ ಸುರಿದ ಮಳೆಯ ಬಳಿಕ ಈ ರಸ್ತೆ ಕೆಸರುಗದ್ದೆಯಾಗಿದೆ.ನಗರದಲ್ಲಿ ಮಳೆ: ಇಂದು ನಗರದಲ್ಲಿ ಸಂಜೆ ವೇಳೆ ದಿಢೀರ್ ಮಳೆ ಸುರಿಯಿತು. ಸುಮಾರು 1 ಗಂಟೆ ಕಾಲ ಮಳೆಯಾಯಿತು. (ಮೊದಲ ಪುಟದಿಂದ) ಹೃದಯ ಗಡಚಿಕ್ಕುವಂತಹ ಆರ್ಭಟದೊಂದಿಗೆ ಗುಡುಗು ಸಹಿತ ಭಾರೀ ಜಲಧಾರೆಯಾಯಿತು. ಕೆಲಕಾಲ ನಗರ ಜನಜೀವನ ಅಸ್ತವ್ಯಸ್ತಗೊಂಡಿತು.