ಮಡಿಕೇರಿ, ಏ. 11: ಬಾಳೆಲೆ ಸಮೀಪದ ದೇವನೂರು ಗ್ರಾಮದ ಶ್ರೀ ನಾರಮನೇಶ್ವರ ವಾರ್ಷಿಕೋತ್ಸವವು ತಾ. 14, 15 ರಂದು ಜರುಗಲಿದೆ. ಈ ವೇಳೆ ಭಂಡಾರ ಇಳಿಸುವದು, ದೇವರ ಜಳಕ, ರುದ್ರಾಭಿಷೇಕ, ಪುಷ್ಪಾರ್ಚನೆ, ಮಹಾಪೂಜೆ ನೆರವೇರಲಿದೆ ಎಂದು ಪ್ರಕಟಣೆ ತಿಳಿಸಿದೆ.
ಕೊರಗಜ್ಜ ನೇಮ
ಸಂಪಾಜೆ ಚೆಡಾವು ಗ್ರಾಮದ ಶ್ರೀ ಕೊರಗಜ್ಜ ವಾರ್ಷಿಕ ನೇಮೋತ್ಸವವು ತಾ. 14, 15 ರಂದು ಜರುಗಲಿದೆ. ಸನ್ನಿಧಿಯ ಗುಳಿಗ, ಪಾಷಾಣಮೂರ್ತಿ, ಪಂಜುರ್ಲಿ, ಕೊರಗಜ್ಜ ದೈವಗಳ ವಾರ್ಷಿಕೋತ್ಸವದೊಂದಿಗೆ ಸನ್ನಿಧಿಯಲ್ಲಿ ಗಣಹೋಮ, ಪೂಜಾದಿಗಳೊಂದಿಗೆ ಅನ್ನದಾನ ನಡೆಯಲಿದೆ.
ದೇವರ ಉತ್ಸವ
ಮೊಣ್ಣಂಗೇರಿ ಗಾಳಿಬೀಡು ಗ್ರಾಮದ ಹೊರಮಲೆ ಶ್ರೀ ಭದ್ರಕಾಳಿ ದೇವರ ದ್ವೈವಾರ್ಷಿಕ ಉತ್ಸವವು ತಾ. 12 ರಿಂದ (ಇಂದಿನಿಂದ) ಆರಂಭಗೊಳ್ಳಲಿದೆ. ತಾ 14ರ ತನಕ ವಿವಿಧ ದೈವಿಕ ಕೈಂಕರ್ಯಗಳು ಜರುಗಲಿದೆ ಎಂದು ದೇವಸ್ಥಾನದ ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.