ಸಿದ್ದಾಪುರ, ಏ. 11: ಇಲ್ಲಿನ ಸಿಟಿ ಬಾಯ್ಸ್ ಯುವಕ ಸಂಘ ಆಯೋಜಿಸಿರುವ ಮೂರನೇ ಆವೃತ್ತಿಯ ಕೊಡಗು ಚಾಂಪಿಯನ್ಸ್ ಲೀಗ್ (ಕೆಸಿಎಲ್) ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯಾಟ ಹಾಗೂ ಸಮಾರೋಪ ಸಮಾರಂಭ ತಾ. 12 ರಂದು (ಇಂದು) ನಡೆಯಲಿದೆ.

ಕಳೆದ ನಾಲ್ಕು ದಿನಗಳಿಂದ ನಡೆದ ಲೀಗ್ ಮಾದರಿಯ ಪಂದ್ಯಾಟದಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದು, ನಾಲ್ಕು ತಂಡಗಳು ಅಂತಿಮ ಹಂತಕ್ಕೆ ತಲಪಿವೆÉ. ಎ ಗ್ರೂಪಿನಿಂದ ರಾಯಲ್ಸ್ ವೀರಾಜಪೇಟೆ ಕ್ವಾಲಿಫಯರ್ ಹಾಗೂ ಕ್ರಿಯೇಟಿವ್ ಚಾಣಕ್ಯ ಮಡಿಕೇರಿ ಎಲಿಮನೇಟರ್ ಆಗಿ ಹೊರಹೊಮ್ಮಿದ್ದು, ಬಿ ಗ್ರೂಪಿನಿಂದ ಫಯರ್ ಟೈಗರ್ಸ್ ಸಿದ್ದಾಪುರ ಕ್ವಾಲಿಫಯರ್ ಹಾಗೂ ಎಫ್ ಜಿ ಸಿ ಹುಂಡಿ ಎಲಿಮನೇಟರ್ ಸ್ಥಾನ ಪಡೆದಿದೆ.

ತಾ. 12 ರಂದು ಬೆಳಿಗ್ಗೆ 9 ಗಂಟೆಗೆ ಅಂತಿಮ ಹಂತದ ಪಂದ್ಯಾಟಗಳು ಪ್ರಾರಂಭವಾಗಲಿದ್ದು, ಅಪರಾಹ್ನ 3.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ರಾಜ್ಯದ ಹಾಗೂ ಜಿಲ್ಲೆಯ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡಕ್ಕೆ ರೂ. 1,15,151 ಹಾಗೂ ಟ್ರೋಫಿ ಮತ್ತು ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ. 56,565 ಹಾಗೂ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವದು.