ಶನಿವಾರಸಂತೆ, ಏ. 10: ಸಮೀಪದ ಮುಳ್ಳೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಮಾರ್ಗದರ್ಶಕ ಅಧಿಕಾರಿಯಾಗಿ ನಿಡ್ತ ಸರಕಾರಿ ಪ್ರೌಢಶಾಲೆಯ ಇಂಗ್ಲೀಷ್ ಶಿಕ್ಷಕ ವಿಶ್ವನಾಥ್ ಭೇಟಿ ನೀಡಿ, ವಿದ್ಯಾರ್ಥಿಗಳ ಪ್ರಗತಿಪತ್ರ ಹಾಗೂ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲಿಸಿದರು.

ಈ ಸಂದರ್ಭ ಬೆಂಗಳೂರಿನ ದಾನಿಗಳಾದ ಎನ್. ಗುರುಪ್ರಸಾದ್ ಮತ್ತು ಪೂರ್ಣಿಮಾ ಅಯ್ಯಂಗಾರ್ ದಂಪತಿ ವಿದ್ಯಾರ್ಥಿಗಳಿಗೆ ಸಾಮೂಹಿಕ ಕವಾಯತು ಮಾಡುವಾಗ ಧರಿಸಲು ಕೊಡುಗೆ ನೀಡಿದ ಮೂವತ್ತೇಳು ಬಿಳಿಯ ಟೋಪಿಗಳನ್ನು ಹಾಗೂ ಅತಿ ಹೆಚ್ಚು ಅಂಕಗಳಿಸಿದ 5ನೇ ತರಗತಿಯ ಹೆಚ್. ಅಪರ್ಣಾ ಎಂಬ ವಿದ್ಯಾರ್ಥಿನಿಗೆ ಬಹುಮಾನ ವಿತರಿಸಲಾಯಿತು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಸಾಮೂಹಿಕ ಕವಾಯತು ಮಾಡಲು ವಿಶೇಷ ಸಮವಸ್ತ್ರ ಹಾಗೂ ಶಾಲೆಗೆ ಸೋಲಾರ್ ದೀಪಗಳನ್ನು ಒದಗಿಸಿಕೊಡುವ ಭರವಸೆ ದಾನಿ ದಂಪತಿಯಿಂದ ದೊರೆತಿದೆ. ಮುಖ್ಯ ಶಿಕ್ಷಕ ಮಂಜುನಾಥ್ ಹಾಗೂ ಸಹ ಶಿಕ್ಷಕ ಸಿ.ಎಸ್. ಸತೀಶ್ ಹಾಜರಿದ್ದರು.