*ಸಿದ್ದಾಪುರ, ಏ. 11: ಕರಿಮೆಣಸು ಕುಯ್ಯುತ್ತಿದ್ದ ಸಂದರ್ಭ ಏಣಿಯಿಂದ ಬಿದ್ದಿದ್ದ ಕಾರ್ಮಿಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾನೆ. ಇಲ್ಲಿಗೆ ಸಮೀಪದ ಅಭ್ಯತ್ಮಂಗಲದ ಗ್ರೀನ್ ಹಿಲ್ಸ್ ತೋಟದಲ್ಲಿ ಕಾರ್ಮಿಕನಾಗಿದ್ದ ಶೇಖರ್ (40) ಎಂಬಾತ ಕಳೆದ 10 ದಿನಗಳ ಹಿಂದೆ ಮೆಣಸು ಕುಯ್ಯುತ್ತಿದ್ದ ಸಂದರ್ಭ ಏಣಿಯಿಂದ ಬಿದ್ದು ಗಂಭೀರ ಗಾಯವಾಗಿತ್ತು. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಆತ ಇಂದು ಸಾವನ್ನಪ್ಪಿದ್ದಾನೆ. ಅಂತ್ಯಕ್ರಿಯೆ ತಾ. 12 ರಂದು (ಇಂದು) ನಡೆಯಲಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.