ಗೋಣಿಕೊಪ್ಪಲು, ಏ. 10: ಬಲಿಜ ಕ್ರೀಡೋತ್ಸವ ಮೇ 26 ಹಾಗೂ 27 ರಂದು ದಕ್ಷಿಣ ಕೊಡಗಿನ ಹಾತೂರು ಶಾಲಾ ಮೈದಾನದಲ್ಲಿ ನಡೆಯಲಿದ್ದು, ಕ್ರೀಡೋತ್ಸವ ಪ್ರಚಾರ ಹಾಗೂ ಗಣತಿ ಕಾರ್ಯಕ್ರಮವನ್ನು ತಾ. 8 ರಿಂದ ಆರಂಭಿಸಲಾಯಿತು.
ನಾಪೆÇೀಕ್ಲು ಕಕ್ಕುಂದಕಾಡು ಶ್ರೀ ವೆಂಕಟರಮಣ ಸ್ವಾಮಿಯ ಪೂಜೆಯೊಂದಿಗೆ ನಾಪೆÇೀಕ್ಲು ವ್ಯಾಪ್ತಿಯ ಗಣತಿಗೆ ಚಾಲನೆ ನೀಡಲಾಯಿತು. ನಾಪೆÇೀಕ್ಲು ಗ್ರಾಮದಲ್ಲಿ 100ಕ್ಕೂ ಅಧಿಕ ಬಲಿಜ ಜನಾಂಗ ವಾಸವಿದ್ದು, ಕ್ರೀಡೋತ್ಸವ ಯಶಸ್ಸಿಗೆ ಸಹಕಾರ ನೀಡಲು ಜಿಲ್ಲಾ ಬಲಿಜ ಸಮಾಜ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಇದೇ ಸಂದರ್ಭ ಮನವಿ ಮಾಡಿದರು. ನಾಪೆÇೀಕ್ಲುವಿನ ಹಿರಿಯರಾದ ಟಿ.ಎ. ಆನಂದಸ್ವಾಮಿ, ಟಿ.ವಿ. ಶ್ರೀನಿವಾಸ್, ಕಮಲಾಕ್ಷಿ ಒಳಗೊಂಡಂತೆ ಬಲಿಜ ಜನಾಂಗದ ಪ್ರಥಮ ಕ್ರೀಡಾಹಬ್ಬಕ್ಕೆ ಸಂಪೂರ್ಣ ಸಹಕಾರ ನೀಡುವದಾಗಿಯೂ ಟೆನ್ನಿಸ್ ಬಾಲ್ ಕ್ರಿಕೆಟ್, ಹಗ್ಗ-ಜಗ್ಗಾಟ ಹಾಗೂ ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ನಾಪೆÇೀಕ್ಲು ಕ್ರೀಡಾಳುಗಳು ಭಾಗವಹಿಸುವದಾಗಿ ಮಾಹಿತಿ ನೀಡಿದರು. ಗಣತಿ ಸಂದರ್ಭ ಜಿಲ್ಲಾ ಬಲಿಜ ಸಮಾಜ ಪ್ರಧಾನ ಕಾರ್ಯದರ್ಶಿ ಟಿ.ಸಿ. ಗೀತಾ ನಾಯ್ಡು, ಜಿಲ್ಲಾ ಬಲಿಜ ಸಮಾಜದ ನಿರ್ದೇಶಕಿ ಭವಾನಿ ಭಾನು ಪಾಲ್ಗೊಂಡಿದ್ದು, ನಾಪೆÇೀಕ್ಲು ಪಟ್ಟಣದಲ್ಲಿಯೂ ಬಲಿಜ ಗಣತಿ ನಡೆಸಲಾಯಿತು.
ಪೆÇನ್ನಂಪೇಟೆಯಲ್ಲಿ ಚಾಲನೆ
ದಕ್ಷಿಣ ಕೊಡಗಿನಲ್ಲಿ ಬೆಕ್ಕೆಸೊಡ್ಲೂರುವಿನಿಂದ ಮೊದಲಿಗೆ ಬಲಿಜ ಗಣತಿಗೆ ಚಾಲನೆ ನೀಡಲಾಗಿದ್ದರೂ ಸುಮಾರು ಒಂದೂವರೆ ವರ್ಷ ಗಣತಿ ಕಾರ್ಯ ನೆನೆಗುದಿಗೆ ಬಿದ್ದಿತ್ತು. ತಾ. 9 ರಿಂದ ವೀರಾಜಪೇಟೆ ತಾಲೂಕು ಬಲಿಜ ಸಮಾಜ ಮಾಜಿ ಅಧ್ಯಕ್ಷ ಎನ್.ಕೆ. ನಾರಾಯಣ ಸ್ವಾಮಿ ನಾಯ್ಡು ಅವರು ಪೆÇನ್ನಂಪೇಟೆಯ ಟಿ.ಆರ್. ವಿಜಯ ಹಾಗೂ ಟಿ.ವಿ. ಹೇಮಾವತಿ ದಂಪತಿ ಮನೆಯಿಂದ ಗಣತಿಗೆ ಚಾಲನೆ ನೀಡಿದರು. ಬಳಿಕ ಟಿ.ಎನ್. ಶ್ರೀನಿವಾಸ್, ಟಿ.ಎಸ್. ಪುಟ್ಟಸ್ವಾಮಿ ಒಳಗೊಂಡಂತೆ ಸುಮಾರು 10ಕ್ಕೂ ಅಧಿಕ ಮನೆ ಮನೆಗೆ ಭೇಟಿ ನೀಡಿ ಬಲಿಜ ಕ್ರೀಡೋತ್ಸವ ಪ್ರಚಾರ ಮತ್ತು ಗಣತಿ ನಡೆಸಲಾಯಿತು.
ಇಂದು ಹುದಿಕೇರಿ ಹಾಗೂ ಬಿರುನಾಣಿಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜಿಲ್ಲಾ ನಿರ್ದೇಶಕ ಟಿ.ಆರ್. ವಿಜಯ, ಕ್ರೀಡೋತ್ಸವ ಆಹಾರ ಸಮಿತಿ ಸಂಚಾಲಕರಾದ ಟಿ.ಆರ್. ಪ್ರಕಾಶ್, ಟಿ.ವಿ. ಹೇಮಾವತಿ, ನಾರಾಯಣ ಸ್ವಾಮಿ ನಾಯ್ಡು ಹಾಗೂ ಜಿಲ್ಲಾಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಪಾಲ್ಗೊಂಡಿದ್ದರು.